ಅಡ್ಡ ಬಂದ ನಾಯಿ ಉಳಿಸಲು ಹೋಗಿ ಬೈಕ್ ಪಲ್ಟಿ; ಸವಾರನ ಜೀವ ಉಳಿಸಿತು ಹೆಲ್ಮೆಟ್

dfgdfgrt
Published on

ಉತ್ತರಕನ್ನಡ: ರಸ್ತೆಗೆ ಅಡ್ಡವಾಗಿ ಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬೈಕ್​​​ ಸವಾರನೋರ್ವ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿರುವ ಘಟನೆ ತಾಲೂಕಿನ ಚಿತ್ತಾಕುಲಾ ಗ್ರಾಮದಲ್ಲಿ ನಡೆದಿದೆ.

ಚಿತ್ತಾಕುಲ ಬಳಿ ಸ್ವಲ್ಪ ಮಳೆಯಾಗಿತ್ತು. ಎದುರಿಗೆ ಬಂದ ನಾಯಿ ತಪ್ಪಿಸಲು ಹೋಗಿ ಬೈಕ್​ಗೆ ಬ್ರೇಕ್ ಹಾಕಿದ್ದು, ಬೈಕ್ ನಡು ರಸ್ತೆಯಲ್ಲಿಯೇ ಸ್ಕಿಡ್ ಆಗಿ ಪಲ್ಟಿಯಾಗಿದೆ. ಆಗ ಬೈಕ್​ ಸವಾರ ಸ್ವಲ್ಪ ದೂರ ಜಾರಿಕೊಂಡು ಬಿದ್ದಿದ್ದಾರೆ.

ತಲೆ ಮೇಲಿದ್ದ ಹೆಲ್ಮೆಟ್​ ಆತನ ಪ್ರಾಣಿ ಉಳಿಸಿದೆ. ಸವಾರ ತಾನಾಗಿಯೇ ಎದ್ದು ಸ್ವಲ್ಪ ಹೊತ್ತು ಸುಧಾರಿಸಿಕೊಂಡು ನಂತರ ತೆರಳಿದ್ದಾರೆ. ಈ ದೃಶ್ಯ ಅಲ್ಲೇ ಹತ್ತಿರದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net