ಬೈಕ್ ಬಣ್ಣ ಬದಲಿಸಿ ಸೈಲೆನ್ಸರ್ ಪರಿವರ್ತಿಸಿದ್ದವನಿಗೆ 6,500 ರೂ. ದಂಡ

3M_Silencer_Coating_Bike_3 (1)
Published on

ಶಿವಮೊಗ್ಗ: ಹೆಲ್ಮೆಟ್ ಧರಿಸಿದೇ ಬೈಕ್‌ ಚಲಾಯಿಸಿದ್ದಲ್ಲದೆ, ವಾಹನದ ಬಣ್ಣ ಬದಲಿಸಿ ಸೈಲೆನ್ಸರ್ ಅನ್ನೂ ಪರಿವರ್ತಿಸಿದ್ದ ಯುವಕನಿಗೆ ಭದ್ರಾವತಿಯ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು 6,500 ರೂ. ದಂಡ ವಿಧಿಸಿದೆ.

ಭದ್ರಾವತಿ ಹೊಸಮನೆಯ ಗಗನ್ (25) ದಂಡಕ್ಕೆ ಒಳಗಾದ ಯುವಕ. ಈತ ಕಳೆದ ಫೆ.23ರಂದು ಭದ್ರಾವತಿಯ ಜಯಶ್ರೀ ವೃತ್ತದ ಬಳಿಕ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವಾಗ ಪೊಲೀಸರು ಬಳಿ ಸಿಕ್ಕಿಬಿದ್ದಿದ್ದ. ಬೈಕ್‌ನ ಆರ್‌ಸಿ ಪರಿಶೀಲಿಸಿದಾಗ ಬಣ್ಣ ಕೂಡ ಬದಲಿಸಿದ್ದ.

ಜತೆಗೆ ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಕೂಡ ಅಳವಡಿಸಿದ್ದ. ಹಾಗಾಗಿ ಗಗನ್ ವಿರುದ್ಧ ಭದ್ರಾವತಿ ನ್ಯೂಟೌನ್ ಠಾಣೆ ಪಿಎಸ್‌ಐ ರಂಗನಾಥ್ ಅವರು ಐಎಂವಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಯತೀಶ್ ಅವರು ಗಗನ್ ಮೇಲಿನ ಆರೋಪಗಳು ಸಾಬೀತಾದ ಹಿನ್ನಲೆಯಲ್ಲಿ ದಂಡ ವಿಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net