ಎರಡು ಬೈಕ್ ಮುಖಾಮುಖಿ ಡಿಕ್ಕಿ; ಓರ್ವ ಸ್ಥಳದಲ್ಲಿಯೆ ಸಾವು

ebbfe771c4f2e1608413e1fa68e04fd8
Published on

ಹಾನಗಲ್ಲ: ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಸ್ಥಳದಲ್ಲಿಯೆ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ತಾಲೂಕಿನ ಕೂಸಗೂರ-ತಿಳವಳ್ಳಿ ರಸ್ತೆಯಲ್ಲಿ ಬುಧವಾರ ಸಂಭವಿಸಿದೆ.
ತಾಲೂಕಿನ ಕೂಸಗೂರ ಗ್ರಾಮದ ಚಂದ್ರಪ್ಪ ಮಟ್ಟಿಮನಿ ಮೃತನು. ಈತನ ಜತೆಗೆ ಲಕ್ಷ್ಮೀ ಕಚವಿ ಹಾಗೂ ಎದುರಿನ ಬೈಕ್‌ನಲ್ಲಿದ್ದ ಮನೋಜ ಮಟ್ಟಿಮನಿ ಎಂಬುವರು ಗಾಯಗೊಂಡಿದ್ದು ಚಿಕಿತ್ಸೆಗಾಗಿ ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಂದ್ರಪ್ಪ ಕೂಸನೂರ ಗ್ರಾಮದಿಂದ ತಿಳವಳ್ಳಿ ಕಡೆಗೆ ಹೊರಟಿದ್ದ. ದಾರಿ ಮಧ್ಯೆ ಎದುರಿಗೆ ಬಂದ ಬೈಕ್‌ಗೆ ಪರಸ್ಪರ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಚಂದ್ರಪ್ಪ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net