ಬೈಕ್ ಡಿಕ್ಕಿ, ಸಾವು

bike accident 1
Published on

ಹುಬ್ಬಳ್ಳಿ: ಬೈಕ್ ಡಿಕ್ಕಿ ಹೊಡೆದು ಗಾಯಗೊಂಡು ಕಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧ ಮೃತಪಟ್ಟ ಘಟನೆ ನಡೆದಿದೆ. ಹುಬ್ಬಳ್ಳಿಯಿಂದ ಶಿಗ್ಗಾಂವಿ ಕಡೆಗೆ ಹೊರಟಿದ್ದ ಬೈಕ್ ಸವಾರ ಸೈಯದ್ ಅಹ್ಮದ್ ಫಕ್ರುದ್ದೀನ್, ವರೂರು ಗ್ರಾಮದ ಅರಳಿಕಟ್ಟಿ ಕ್ರಾಸ್ ಹತ್ತಿರ ರಸ್ತೆ ದಾಟುತ್ತಿದ್ದ ಮಹಾದೇವಪ್ಪ ಮ್ಯಾಗಡಿ (63) ಅವರಿಗೆ ಡಿಕ್ಕಿ ಪಡಿಸಿದ್ದ. ತೀವ್ರವಾಗಿ ಗಾಯಗೊಂಡಿದ್ದ ಮಹಾದೇವಪ್ಪನನ್ನು ಕಿಮ್ಸ್​ಗೆ ದಾಖಲಿಸಲಾಗಿತ್ತು. ಚಿಕಿತೆ ಫಲಿಸದೇ ಮೃತಪಟ್ಟಿದ್ದಾನೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net