ಪೊಲೀಸರ ಬಲೆಗೆ ಬಿದ್ದ ಕಳ್ಳ

Crime Logo
Published on

ಈತ 2 ತಿಂಗಳು ಹಿಂದೆ ಪಟ್ಟಣದ ದೇವಾಂಗ ಪೇಟೆಯ ತಿರುವಣ್ಣಾ ಬೀದಿಯಲ್ಲಿ ಬೈಕ್ ಕಳ್ಳತನ ಮಾಡಿದ್ದು, ಜೂ.9ರಂದು ನಾಯಕರ ಬೀದಿಯ ಎರಡು ಮನೆಗಳ ಬೀಗ ಮುರಿದು 9 ಸಾವಿರ ನಗದು, ಒಂದು ಜೊತೆ ಓಲೆ, ಜುಮುಕಿ, ಉಂಗುರ ಕಳ್ಳತನ ಮಾಡಿ ಪರಾರಿಯಾಗಿದ್ದ. ಈ ಬಗ್ಗೆ ಪಟ್ಟಣ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆ ಕಾರ್ಯ ಆರಂಭಿಸಿದ್ದರು. ಅದರಂತೆ ಶನಿವಾರ ರಾತ್ರಿ ಪಟ್ಟಣದ ಬಸ್ ನಿಲ್ದಾಣದ ಬಳಿ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪಟ್ಟಣದ ದಕ್ಷಿಣ ಬಡಾವಣೆ ನಿವಾಸಿ ಭಾಸ್ಕರ್ (25) ಬಂಧಿತ ಆರೋಪಿ. ಈತನಿಂದ ಒಂದು ಬೈಕ್, ಚಿನ್ನಾಭರಣ ಹಾಗೂ 2,500 ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೊಳ್ಳೇಗಾಲ: ಪಟ್ಟಣದ ಹಲವೆಡೆ ಬೈಕ್, ಚಿನ್ನಾಭರಣ, ನಗದು ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪಟ್ಟಣ ಠಾಣಾ ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net