ಬೈಕ್​ಗೆ ಕಾರು ಡಿಕ್ಕಿಯಾಗಿ ಸವಾರ ಸಾವು

Bike Accident
Published on

ರಾಣೆಬೆನ್ನೂರ: ಬೈಕ್​ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್​ ಸವಾರ ಸ್ಥಳದಲ್ಲಿಯೆ ಮೃತಪಟ್ಟ ಘಟನೆ ತಾಲೂಕಿನ ದೇವಗೊಂಡನಕಟ್ಟಿ ಬಳಿ ಎನ್​ಎಚ್​-&48ರಲ್ಲಿ ಸೋಮವಾರ ನಡೆದಿದೆ.

ಹರಿಹರ ತಾಲೂಕಿನ ದೂಳೆಹೊಳೆ ಗ್ರಾಮದ ಸಂತೋಷ ಪರಮೇಶ್ವರಪ್ಪ (39) ಮೃತ ಬೈಕ್​ ಸವಾರ.

ಈತ ದೇವಗೊಂಡನಕಟ್ಟಿ ಬಳಿ ರಸ್ತೆ ದಾಟುತ್ತಿದ್ದ ಸಮಯದಲ್ಲಿ ಕಾರು ಬಂದು ಡಿಕ್ಕಿ ಹೊಡೆದಿದೆ. ಇದರಿಂದ ಸಂತೋಷ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಹಲಗೇರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net