ಬೈಕ್-ಕಾರು ಅಪಘಾತ, ಸವಾರ ಮೃತ್ಯು

Accident kkd
ಉದನೆ ಸಮೀಪದ ನೇಲ್ಯಡ್ಕದಲ್ಲಿ ಬೈಕ್ ಮತ್ತು ಕಾರು ನಡುವೆ ನಡೆದ ಅಪಘಾತ
Published on

ಕೊಕ್ಕಡ : ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಉದನೆಯ ನೇಲ್ಯಡ್ಕ ಎಂಬಲ್ಲಿ ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ಮೃತರನ್ನು ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ನಳಾಲು ನಿವಾಸಿ ರವೀಂದ್ರ(51) ಎಂದು ಗುರುತಿಸಲಾಗಿದೆ.
ಕಾರು ಬೆಂಗಳೂರಿಂದ ಮಂಗಳೂರಿಗೆ ಬರುತ್ತಿದ್ದು, ರವೀಂದ್ರ ರೆಖ್ಯದಿಂದ ಉದನೆ ಕಡೆಗೆ ಹೋಗುತ್ತಿದ್ದರು ಎನ್ನಲಾಗಿದೆ. ನೇಲ್ಯಡ್ಕ ಶಾಲೆಯ ಎದುರು ನೂತನವಾಗಿ ನಿರ್ಮಾಣವಾಗಿರುವ ಫ್ಲೈಓವರ್‌ನಲ್ಲಿ ನಡೆದ ಅಪಘಾತದ ತೀವ್ರತೆಗೆ ಬೈಕ್ ನಜ್ಜುಗುಜ್ಜಾಗಿದೆ. ಮೃತರು ಪತ್ನಿ, ಈರ್ವರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net