

ಹಿರೇಕೆರೂರ: ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿ ಮೃತಪಟ್ಟು, ಹಿಂಬದಿ ಕುಳಿತ ಪತ್ನಿಗೆ ಗಂಭೀರ ಗಾಯವಾದ ಘಟನೆ ತಾಲೂಕಿನ ಎಂ.ಕೆ. ಯತ್ತಿನಹಳ್ಳಿ ಕ್ರಾಸ್ ಬಳಿ ಭಾನುವಾರ ನಡೆದಿದೆ.
ಸೊರಬ ತಾಲೂಕಿನ ವೃತ್ತಿಕೊಪ್ಪ ಗ್ರಾಮದ ಪ್ರಕಾಶ ಶೇಖರಪ್ಪ ಚಿಕ್ಕಚೌಟೇರ ಮೃತ ವ್ಯಕ್ತಿ. ಗೊಡಚಿಕೊಂಡ ಗ್ರಾಮದಲ್ಲಿ ಸಂಬಂಧಿಕರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪತ್ನಿ ಪುಷ್ಪಾ ಜತೆ ಚಿಕ್ಕೇರೂರ, ಬೆಟಕೇರೂರ ಮಾರ್ಗವಾಗಿ ಎಂ.ಕೆ.ಯತ್ತಿನಹಳ್ಳಿ ಕ್ರಾಸ್ ಬಳಿ ಬೈಕ್ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.
ಹಂಸಭಾವಿಯಿಂದ ಹಿರೇಕೆರೂರ ಕಡೆಗೆ ಹೊರಟಿದ್ದ ಕಾರ್ ಬೈಕಿಗೆ ಡಿಕ್ಕಿ ಹೊಡೆದಿದೆ. ತಕ್ಷಣ ಗಾಯಾಳು ಪ್ರಕಾಶ ಮತ್ತು ಆತನ ಪತ್ನಿ ಪುಷ್ಪಾ ಅವರನ್ನು ಹಿರೇಕೆರೂರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ನಂತರ ಹೆಚ್ಚಿನ ಉಪಚಾರಕ್ಕೆ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಪ್ರಕಾಶ ಸೋಮವಾರ ಮೃತಪಟ್ಟಿದ್ದಾರೆ. ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.