

ರಾಣೆಬೆನ್ನೂರ: ಎನ್ಡ್ಲ್ಯೂಕೆಎಸ್ಆರ್ಟಿಸಿ ಬಸ್ವೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೆ ಮೃತಪಟ್ಟ ಟನೆ ನಗರದ ಹೊರವಲಯದ ಜಾನುವಾರು ಮಾರುಕಟ್ಟೆ ಬಳಿ ಭಾನುವಾರ ನಡೆದಿದೆ.
ಹಾವೇರಿ ತಾಲೂಕಿನ ಅಕ್ಕೂರ ಗ್ರಾಮದ ಜಗದೀಶ ವಿರುಪಾಕ್ಷಪ್ಪ ತೋಟಗೇರ (45) ಮೃತ ಬೈಕ್ ಸವಾರ.
ಈತ ಜಾನುವಾರ ಮಾರುಕಟ್ಟೆಯಿಂದ ವಾಪಸ್ ಊರಿಗೆ ತೆರಳುತ್ತಿದ್ದ ಸಮಯದಲ್ಲಿ ಬಸ್ ಬಂದು ಬೈಕ್ಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಬೈಕ್ ಬಸ್ನ ಚಕ್ರದ ಅಡಿಗೆ ಹೋಗಿ ಸಿಲುಕಿಕೊಂಡಿದ್ದು ಸವಾರ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.