ಬೈಕ್​ಗೆ ಮತ್ತೊಂದು ಬೈಕ್​ ಡಿಕ್ಕಿ ಒಬ್ಬ ಸಾವು

Bike Accident_2
Published on

ರಾಣೆಬೆನ್ನೂರ: ಬೈಕ್​ಗೆ ಮತ್ತೊಂದು ಬೈಕ್​ ಡಿಕ್ಕಿ ಹೊಡೆದು ಓರ್ವ ಮೃತಪಟ್ಟ ಘಟನೆ ನಗರದ ಇಂದಿರಾ ಕ್ಯಾಂಟೀನ್​ ಬಳಿ ಬುಧವಾರ ನಡೆದಿದೆ.

ಇಲ್ಲಿಯ ವಿಶ್ವ ಬಂಧು ನಗರದ ನಿವಾಸಿ ಸಂಪತಕುಮಾರ ಸಿದ್ದರಾಮಯ್ಯ ಮಠ ಮೃತ ಬೈಕ್​ ಸವಾರ.

ಈತ ಬೈಕ್​ ಮೇಲೆ ತೆರಳುತ್ತಿದ್ದ ಸಮಯದಲ್ಲಿ ಮತ್ತೊಂದು ಬೈಕ್​ ಬಂದು ಡಿಕ್ಕಿ ಹೊಡೆದಿದೆ. ಇದರಿಂದ ಗಾಯಗೊಂಡಿದ್ದ ಸಂಪತಕುಮಾರನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಸಂಚಾರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net