ಬೈಕ್​ಗೆ ಮತ್ತೊಂದು ಬೈಕ್​ ಡಿಕ್ಕಿ ಒಬ್ಬ ಸಾವು

Crime Logo
Published on

ಬ್ಯಾಡಗಿ: ಬೈಕ್​ಗೆ ಮತ್ತೊಂದು ಬೈಕ್​ ಡಿಕ್ಕಿಯಾದ ಪರಿಣಾಮ ಓರ್ವ ಸವಾರ ಸ್ಥಳದಲ್ಲಿಯೆ ಮೃತಪಟ್ಟ ಘಟನೆ ತಾಲೂಕಿನ ದೊಮ್ಮನಾಳ ಕ್ರಾಸ್​ ಬಳಿ ಶುಕ್ರವಾರ ನಡೆದಿದೆ.

ತಾಲೂಕಿನ ಮುಳಥಳ್ಳಿ ಗ್ರಾಮದ ಫಕ್ಕಿರೇಶ ಶಿವಪ್ಪ ಕುಂಬಾರ ಮೃತ ವ್ಯಕ್ತಿ.

ಇವರು ಬೈಕ್​ ಮೇಲೆ ಹಾವೇರಿ-&ಚಿಕ್ಕಬಾಸೂರ ರಸ್ತೆಯಲ್ಲಿ ಬರುತ್ತಿದ್ದ ಸಮಯದಲ್ಲಿ ಮತ್ತೊಂದು ಬೈಕ್​ ಬಂದು ಡಿಕ್ಕಿ ಹೊಡೆದಿದೆ. ಇದರಿಂದ ಫಕ್ಕಿರೇಶ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕಾಗಿನೆಲೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net