ಹಾವೇರಿಯಲ್ಲಿ ಬೈಕ್ ಗೆ ಗುದ್ದಿದ ಟಿಪ್ಪರ್: ನಾಲ್ವರು ಸ್ಥಳದಲ್ಲೇ ಸಾವು

Haveri Accident
Haveri Accident
Published on

ಹಾವೇರಿ: ವೇಗವಾಗಿ ಚಲಿಸುತ್ತಿದ್ದ ಟಿಪ್ಪರ್ ಒಂದು ಬೈಕ್ ಗೆ ಡಿಕ್ಕಿ ಹೊಡೆದುಕೊಂಡು ಹೋದ ಪರಿಣಾಮ ಪತಿ, ಪತ್ನಿ, ಇಬ್ಬರು ಮಕ್ಕಳು ಸೇರಿ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರ ತಾಲೂಕಿನ ಇಟಗಿ ಗ್ರಾಮದ ಬಳಿ ಇಂದು ಮಧ್ಯಾಹ್ನ ನಡೆದಿದೆ.

ಹಿರೇಕೆರೂರ ದುರ್ಗಮ್ಮ ದೇವಿ ಜಾತ್ರೆಗೆ ತೆರಳಿದ ಪತಿ, ಪತ್ನಿ ಹಾಗೂ ಮಕ್ಕಳು, ವಾಪಸ್ ಮನೆಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಮೃತಪಟ್ಟವರನ್ನು ಸಿದ್ದಪ್ಪ ಹನುಮಂತಪ್ಪ ನಾಗೇನಹಳ್ಳಿ (38), ಪತ್ನಿ ಅನಸೂಯಾ(32), ಮಗಳು ವನಿತಾ (11), ಮಗಳು ಸುನಿತಾ (9), ಎಂದು ಗುರುತಿಸಲಾಗಿದ್ದು, ಮುದೇನೂರು ಗ್ರಾಮದವರಾಗಿದ್ದಾರೆ.

ಬೈಕ್ ಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಹೋದ ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಹಲಗೇರಿ ಠಾಣೆ ಪೊಲೀಸರ ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net