ಲಗ್ನಪತ್ರಿಕೆ ನೀಡಲು ವಧು ಟ್ರಿಪಲ್​ ರೈಡ್ ಹೋಗಿದ್ದ ಬೈಕ್​ ಆ್ಯಕ್ಸಿಡೆಂಟ್​; ಭೀಕರ ಅಪಘಾತಕ್ಕೆ ಮೂವರೂ ಸ್ಥಳದಲ್ಲೇ ಸಾವು...

Accident Bike
Published on

ರಾಯಚೂರು: ರಾಜ್ಯದಲ್ಲಿ ಮತ್ತೆ ಮತ್ತೆ ಭೀಕರ ಅಪಘಾತಗಳು ಸಂಭವಿಸುತ್ತಲೇ ಇದ್ದು, ಇಂದು ನಡೆದ ಮತ್ತೊಂದು ಅಪಘಾತದಲ್ಲಿ ಮದುಮಗಳು ಸೇರಿ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ನಾಲ್ಕೈದು ದಿನಗಳು ಕಳೆದರೆ ತವರು ಮನೆಯನ್ನು ಬಿಟ್ಟು ಗಂಡನ ಮನೆಯನ್ನು ಸೇರಬೇಕಿದ್ದ ವಧು, ಅದಕ್ಕೂ ಮೊದಲೇ ಅಜಾಗರೂಕತೆಯ ಚಾಲನೆಗೆ ಬಲಿಯಾಗಿ ಇಹಲೋಕ ತ್ಯಜಿಸುವಂತಾಗಿದೆ.

ಲಿಂಗಸಗೂರು ತಾಲೂಕಿನ ಅಡವಿಭಾವಿ ಗ್ರಾಮದ ವಧು ರಜಿಯಾ ಬೇಗಂ, ಆಕೆಯ ಫ್ರೆಂಡ್ಸ್ ಅರುಣಾಕ್ಷಿ ಮತ್ತು ವೀರೇಶ್ ಮೃತರು. ರಾಯಚೂರು ಜಿಲ್ಲೆ ಮಸ್ಕಿ ಬಳಿ ಈ ಅಪಘಾತ ಸಂಭವಿಸಿದೆ. ಜನವರಿ 24ರಂದು ನಡೆಯಲಿದ್ದ ತನ್ನ ಮದುವೆಗೆ ಕರೆಯಲು ಗೆಳತಿ ಅರುಣಾಕ್ಷಿ ಹಾಗೂ ವೀರೇಶ್​ ಜತೆ ಒಂದೇ ಬೈಕ್​ನಲ್ಲಿ ರಜಿಯಾ ಬೇಗಂ ಹೋಗಿದ್ದರು.

ಮಾರ್ಗಮಧ್ಯೆ ಮಸ್ಕಿ ಪಟ್ಟಣದ ಬಸ್​ ಡಿಪೋ ಸಮೀಪ ಬೈಕ್​ ಆಯತಪ್ಪಿ ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದಿದೆ. ಬೈಕ್ ಅಪಘಾತಕ್ಕೀಡಾದ ತೀವ್ರತೆಗೆ ಮೂವರೂ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಅಪಘಾತ ಸಂಬಂಧ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net