ಬೈಕ್ ನಿಯಂತ್ರಣ ತಪ್ಪಿ ಅಪಘಾತ, ಸವಾರ ಸಾವು

Accident Death
Published on

ಭಟ್ಕಳ: ರಾಷ್ಟಿ›ೕಯ ಹೆದ್ದಾರಿಯಲ್ಲಿ ನೂತನವಾಗಿ ಅಳವಡಿಸಿದ ಹಂಪ್ ಗಮನಿಸದೆ ಹತ್ತಿರ ಬಂದ ಕೂಡಲೇ ಬ್ರೇಕ್ ಹಾಕಿದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ಸವಾರರಿಬ್ಬರು ಗಂಭೀರ ಗಾಯಗೊಂರು ಅದರಲ್ಲಿ ಒಬ್ಬ ಮೃತಪಟ್ಟ ಘಟನೆ ಶನಿವಾರ ನಡೆದಿದೆ.

ಜೋಗಿಮನೆ ಮುಂಡಳ್ಳಿ ನಿವಾಸಿ ರೂಪೇಶ ಗೋವಿಂದ ದೇವಾಡಿಗ ಮೃತ ಬೈಕ್ ಸವಾರ. ಸುಬ್ರಾಯ ನಾರಾಯಣ ದೇವಾಡಿಗ ಗಾಯಗೊಂಡವ.

ಬೆಳಗ್ಗೆ 12.15ಕ್ಕೆ ರೂಪೇಶ ದೇವಾಡಿಗ, ಸುಬ್ರಾಯ ನಾರಾಯಣ ದೇವಾಡಿಗ ಅವರನ್ನು ತನ್ನ ಬೈಕ್ ಹಿಂದುಗಡೆ ಕೂಡಿಸಿಕೊಂಡು ಮುರ್ಡೆಶ್ವರ ಕಡೆಯಿಂದ ಭಟ್ಕಳ ಕಡೆಗೆ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದರು. ಭಟ್ಕಳ ಶಿರಾಲಿ ರಸ್ತೆ ಚೆಕ್ ಪೋಸ್ಟ್ ಹತ್ತಿರ ನೂತನವಾಗಿ ಅಳವಡಿಸಿದ ಹಂಪ್ ಗಮನಿಸದೇ ಒಮ್ಮೇಲೆ ಬ್ರೇಕ್ ಹಾಕಿ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದಿದ್ದರು. ತೀವ್ರವಾಗಿ ಗಾಯಗೊಂಡ ರೂಪೇಶ ದೇವಾಡಿಗ ಅವರನ್ನು ಮಣಿಪಾಲ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net