ಬೈಕ್ ಡಿಕ್ಕಿಯಾಗಿ ಮಹಿಳೆ ಮೃತ್ಯು

accident-15
Published on

ಮಂಗಳೂರು: ಯೆಯ್ಯಡಿ, ಕೊಂಚಾಡಿ ಬಳಿ ಬುಧವಾರ ಬೆಳಗ್ಗೆ ಬೈಕ್ ಡಿಕ್ಕಿಯಾಗಿ ಸರಿತಾ ಜುಡಿತ್ ಪಿಂಟೋ ಅವರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

\
ಸರಿತಾ ಪಿಂಟೋ ಎಂದಿನಂತೆ ಗುಜರಿ ಹೆಕ್ಕಲು ಗೋಣಿ ಚೀಲ ಹಿಡಿದುಕೊಂಡು ಪದವಿನಂಗಡಿ ಕಡೆಯಿಂದ ಕೆಪಿಟಿ ಕಡೆಗೆ ಹೋಗುವ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅದೇ ರಸ್ತೆಯಲ್ಲಿ ಪದವಿನಂಗಡಿ ಕಡೆಯಿಂದ ಬರುತ್ತಿದ್ದ ಬೈಕ್ ಡಿಕ್ಕಿಯಾಗಿದೆ. ಪರಿಣಾಮ ಅವರು ರಸ್ತೆಗೆ ಬಿದ್ದು ಅವರ ಸೊಂಟಕ್ಕೆ ಮತ್ತು ತಲೆಗೆ ಗುದ್ದಿದ ರೀತಿಯ ಗಾಯಗೊಂಡಿದ್ದ ಅವರನ್ನು ಅಲ್ಲಿ ಸೇರಿದವರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಅಷ್ಟರಲ್ಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net