ಬೈಕ್ ಅಪಘಾತದಿಂದ ವಿದ್ಯಾರ್ಥಿ ಮೃತ್ಯು, ಓರ್ವ ಗಂಭೀರ

Chetan death
Published on

ಕಡಬ: ಪುತ್ತೂರು-ಸವಣೂರು ರಸ್ತೆಯ ಮಾಂತೂರು ಎಂಬಲ್ಲಿ ಮಾ.21ರ ತಡ ರಾತ್ರಿ ಬೈಕ್ ಅಪಘಾತಗೊಂಡು ವಿವೇಕಾನಂದ ಕಾಲೇಜು ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದಾರೆ. ಬೈಕ್‌ನಲ್ಲಿದ್ದ ಸಹ ಸವಾರ  ಗಾಯಗೊಂಡಿದ್ದಾರೆ.

ಮಡಿಕೇರಿ ಸೋಮವಾರ ಪೇಟೆ ನಿವಾಸಿ ಬೋಜಪ್ಪ, ಉಮಾವತಿ ದಂಪತಿ ಪುತ್ರ ಪುತ್ತೂರು ವಿವೇಕಾನಂದ ಕಾಲೇಜಿ ಅಂತಿಮ ಪದವಿ ವಿದ್ಯಾರ್ಥಿ ಚೇತನ್ ಮೃತಪಟ್ಟವರು. ಅವರ ಸ್ನೇಹಿತ ಬೆಳ್ಳಾರೆ ನಿವಾಸಿ ಸುದೀಪ್ ಗಂಭೀರ ಗಾಯಗೊಂಡಿದ್ದು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಚೇತನ್ ಪುತೂರಿನಲ್ಲಿ ಪಿಜಿಯಲ್ಲಿದ್ದು, ಮಾ.21ರಂದು ಮಾಣಿ ಸಾದಿಕುಕ್ಕು ಜಾತ್ರೆಗೆ ಸ್ನೇಹಿತ ಸುದೀಪ್ ಜತೆ ಹೋಗಿದ್ದರು. ಬಳಿಕ ರಾತ್ರಿ ಸ್ನೇಹಿತ ಸುದೀಪ್ ಅವರ ಬೆಳ್ಳಾರೆ ಮನೆಗೆ ಹೋಗುತ್ತಿದ್ದ ವೇಳೆ ಸವಣೂರಿನ ಮಾಂತೂರು ಸಮೀಪ ಬೈಕ್ ಅಪಘಾತಗೊಂಡಿದೆ. ಗಂಭೀರ ಗಾಯಗೊಂಡಿದ್ದ ಇಬ್ಬರನ್ನು ಆಟೋ ರಿಕ್ಷಾದಲ್ಲಿ ಸಾರ್ವಜನಿಕರು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದರು. ಈ ನಡುವೇ ಚೇತನ್ ಮೃತಪಟ್ಟಿದ್ದಾರೆ. ಗಾಯಗೊಂಡ ಸುದೀಪ್‌ರನ್ನು ಮಂಗಳೂರು ಕೆಎಂಸಿ ಆಸ್ಪತ್ರೆಗೆ ರಾತ್ರೋರಾತ್ರಿ ಕರೆದೊಯ್ಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net