

ಆಳಂದ: ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿ, ಇಬ್ಬರಿಗೆ ಗಂಭೀರ ಗಾಯಗಳಾದ ಘಟನೆ ಭೂಸನೂರ ಹತ್ತಿರದ ಗುಡ್ಡದಮ್ಮನ ಗುಡಿ ಹತ್ತಿರ ಮಂಗಳವಾರ ಸಂಜೆ ನಡೆದಿದೆ.
ಆಳಂದನ ನೌಕಡ್ ಗಲ್ಲಿಯ ನಿವಾಸಿ ಹಸನ್ ಅಲಿ ಅಹಿಮದ್ ಅಲಿ ಖಂಡೋವಾಲೆ (38) ಮೃತ ದುರ್ದೈವಿ. ಈತ ಆಳಂದದಿಂದ ಜವಳಿ (ಡಿ) ಗ್ರಾಮಕ್ಕೆ ಹೊಗುತ್ತಿದ, ಇದೇ ವೇಳೆ ಭೂಸನೂರದಿಂದ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆ ಕಡೆಗೆ ಬುಲೆಟ್ ಮೇಲೆ ಮೂರು ಜನರು ಬರುತ್ತಿದ್ದರು. ವೇಗದಲ್ಲಿ ಎರಡು ಡಿಕ್ಕಿ ಹೊಡೆದಿದ್ದು, ಹಸನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬುಲೆಟ್ ಮೇಲಿದ್ದ ಕಿರಣಕುಮಾರ ಸೂರ್ಯಕಾಂತ ಹತಗುಂದಿ, ಸಿದ್ರಾಮ ಸೋಮಣ್ಣ ಪೂಜಾರಿ ಎಂಬುವವರ ಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊರ್ವನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸ್ಥಳಕ್ಕೆ ಪಿಎಸ್ಐ ವಾತ್ಸಲ್ಯ ಬಿರಾದಾರ, ಅಪರಾಧ ವಿಭಾಗದ ಪಿಎಸ್ಐ ಬಸವರಾಜ ಸಣಮನಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.