ಬೈಕ್ ಸ್ಕಿಡ್, ಅರ್ಚಕರಿಗೆ ಮಸೀದಿಯಲ್ಲಿ ಉಪಚಾರ

Published on

ಪುತ್ತೂರು ಗ್ರಾಮಾಂತರ: ಬೈಕ್ ಸ್ಕಿಡ್ ಆಗಿ ರಸ್ತೆಗೆಸೆಯಲ್ಪಟ್ಟು ಗಾಯಗೊಂಡ ಅರ್ಚಕರೊಬ್ಬರಿಗೆ ಮಸೀದಿಯಲ್ಲಿದ್ದ ಮಂದಿ ಮಸೀದಿಯಲ್ಲಿ ಉಪಚರಿಸಿ, ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ಘಟನೆಯೊಂದು ಒಳಮೊಗ್ರು ಗ್ರಾಮದ ಕುಂಬ್ರದಲ್ಲಿ ನಡೆದಿದೆ. ಅರ್ಚಕ ರಘುರಾಮ ಭಟ್ ಅವರ ಬೈಕ್ ಬುಧವಾರ ಸಂಜೆ ಕುಂಬ್ರ ಬದ್ರಿಯಾ ಮಸೀದಿಯ ಎದುರು ಪಲ್ಟಿಯಾಗಿತ್ತು. ರಸ್ತೆಗೆಸೆಯಲ್ಪಟ್ಟು ಕಾಲಿಗೆ ಗಾಯವಾಗಿ ರಕ್ತಸ್ರಾವವಾಗಿದ್ದು, ರಘುರಾಮ ಭಟ್ ಅವರನ್ನು ಮಸೀದಿಯಲ್ಲಿದ್ದ ಮಂದಿ ಉಪಚರಿಸಿ ಪ್ರಥಮ ಚಿಕಿತ್ಸೆ ನೀಡಿದ್ದರು. ರಿಕ್ಷಾ ಚಾಲಕ ಬಶೀರ್ ಕಡ್ತಿವಾರ್ ಅವರು ಗಾಯಾಳುವನ್ನು ಸ್ಥಳೀಯ ಕ್ಲಿನಿಕ್‌ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಚಿಕಿತ್ಸೆ ಪಡೆದ ಬಳಿಕ ಮಸೀದಿಗೆ ಬಂದ ಅರ್ಚಕರು ಸುಮಾರು 2 ಗಂಟೆ ಮಸೀದಿಯಲ್ಲೇ ಮಲಗಿದ್ದರು. ಘಟನೆಯ ಕುರಿತು ಲಭಿಸಿದ ವಾಹಿತಿ ಮೇರೆಗೆ ಈಶ್ವರಮಂಗಲದ ಸಂದೀಪ್ ಕಾರಂತ ಎಂಬವರು ಬಂದು ರಘುರಾಮ ಭಟ್ ಅವರನ್ನು ಕಾರಿನಲ್ಲಿ ಕರೆದೊಯ್ದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net