

ಮಂಗಳೂರು: ಬಿಕರ್ನಕಟ್ಟೆಯಲ್ಲಿ ಡಿವೈಡರ್ ಗೆ ದ್ವಿಚಕ್ರ ವಾಹನ ಡಿಕ್ಕಿಹೊಡೆದು ಇಬ್ಬರು ಗಂಭೀರ ಗಾಯಗೊಂಡಿದ್ದ ಪ್ರಕರಣದಲ್ಲಿ ಸಹ ಸವಾರ ಧೀರಜ್ (25) ಎನ್ನುವವರ ಮಿದುಳು ನಿಷ್ಕ್ರೀಯ ಗೊಂಡಿದ್ದು, ಮನೆಯವರು ಅಂಗಾಗ ದಾನಕ್ಕೆ ನಿರ್ಧರಿದ್ದಾರೆ.ಅಪಘಾತದ ಗಾಯಾಳು ಧೀರಜ್ ಬ್ರೈನ್ ಡೆಡ್ ಎಂದು ನಿನ್ನೆ ರಾತ್ರಿ ವೈದ್ಯರು ಘೋಷಿಸಿದ್ದಾರೆ. ಇಂದು ಅಂಗಾಂಗ ದಾನ ಪ್ರಕ್ರಿಯೆ ನಡೆಯಲಿದೆ. ಚೆನ್ನೈ ನ ಆಸ್ಪತ್ರೆಯೊಂದರ ವೈದ್ಯರ ತಂಡ ಇಂದು ವಿಶೇಷ ವಿಮಾನದಲ್ಲಿ ಆಗಮಿಸಿ ಧೀರಜ್ ನ ಅಂಗಾಗಳಾದ ಹೃದಯ, ಕಿಡ್ನಿ ಮತ್ತು ಲಿವರ್ ಗಳನ್ನು ತೆಗೆದುಕೊಂಡು ಹೋಗಿ ಅಗತ್ಯ ರೋಗಿಗಳಿಗೆ ಅಳವಡಿಸಲಿದೆ. ಶನಿವಾರ ತಡರಾತ್ರಿ ಧೀರಜ್ ಅವರು ಗಣೇಶ್ ಎನ್ನುವವರೊಂದಿಗೆ ಸ್ಕೂಟರ್ ನಲ್ಲಿ ಸಹಸವಾರನಾಗಿ ಕುಳಿತುಕೊಂಡು ಸಾಗುತ್ತಿದ್ದ ವೇಳೆ ನಗರದ ಬಿಕರ್ನಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿ 75ರ ಡಿವೈಡರ್ ಗೆ ಡಿಕ್ಕಿಯಾಗಿ ಇಬ್ಬರೂ ಗಂಭೀರ ಗಾಯಗೊಂಡಿದ್ದರು.