ಬಿಜ್ಜವಾರ ಗ್ರಾಮಪಂಚಾಯತಿ ಅಧ್ಯಕ್ಷರಾಗಿ ಮಹಾದೇವ್ ಆಯ್ಕೆ

bijjavara election
Published on

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ತಾಲೂಕಿನ ಬಿಜ್ಜವಾರ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಗೋಣೂರು ಮಹದೇವ್ ಮತ್ತು ಉಪಾಧ್ಯಕ್ಷರಾಗಿ ಆರತಿ ಆಯ್ಕೆಯಾದರು.
ಗ್ರಾಪಂ ಕಚೇರಿಯಲ್ಲಿ ಚುನಾವಣೆಯಲ್ಲಿ ಚುನಾವಣಾಧಿಕಾರಿ ಅಮೃತಾ ಲಿತಾಂಶ ೋಷಿಸಿದರು.
ಗ್ರಾಪಂ ಒಟ್ಟು 12 ಸದಸ್ಯರ ಬಲ ಹೊಂದಿದ್ದು, ಜೆಡಿಎಸ್ ಬೆಂಬಲಿತ 6, ಕಾಂಗ್ರೆಸ್ ಬೆಂಬಲಿತ 5 ಮತ್ತು ಪಕ್ಷೇತರ ಒಬ್ಬ ಸದಸ್ಯ ಇದ್ದು ಎರಡನೇ ಅವಧಿಗೆ ಸಾಮಾನ್ಯ ಮೀಸಲಾತಿ ಮತ್ತು ಉಪಾಧ್ಯಕ್ಷರಿಗೆ ಸಾಮಾನ್ಯ ಮಹಿಳೆ ಬಂದಿದ್ದು ಅಧ್ಯಕ್ಷರಾಗಿ ಗೋಣೂರು ಮಹದೇವ್ ಮತ್ತು ಉಪಾಧ್ಯಕ್ಷರಾಗಿ ಆರತಿ ಆಯ್ಕೆಯಾಗಿದ್ದಾರೆ.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಭೀಮರಾಜ್ ಮಾತನಾಡಿ, ನಾವು ಚುನಾವಣೆ ವೇಳೆ ಮಾತ್ರ ಪಕ್ಷ ನಂತರ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಪಕ್ಷಾತೀತವಾಗಿ ಶ್ರಮಿಸಿ ಸದಸ್ಯರ ಸಹಕಾರದಿಂದ ಮಾದರಿ ಪಂಚಾಯಿತಿ ಮಾಡಲು ಮುಂದಾಗಬೇಕು ಎಂದು ನೂತನ ಅಧ್ಯಕ್ಷ ಹಾಗೂ ನನ್ನ ಸಹೋದರ ಮಹಾದೇವ್‌ರವರಿಗೆ ಹೇಳಿದರು.
ಬಿಜ್ಜವಾರ ಗ್ರಾಪಂ ನೂತನ ಅಧ್ಯಕ್ಷ ಮಹಾದೇವ್ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮೂಲಸೌಕರ್ಯ ನೀಡುವಲ್ಲಿ ಪಕ್ಷಾತೀತವಾಗಿ ಶ್ರಮಿಸುವುದಾಗಿ ಹಾಗೂ ನಮ್ಮ ಪಂಚಾಯಿತಿಗೆ ಆದಾಯ ಮೂಲ ಕಡಿಮೆಯಿದ್ದರೂ ಸರ್ಕಾರ ಗುರುತಿಸಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕೆಂದು ಮನವಿ ಮಾಡುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net