ಬಿಜಲಗಾಂವದಲ್ಲಿ ಅಖಂಡ ಹರಿನಾಮ ಸಪ್ತಾಹ

15ard02
ಔರಾದ್ ತಾಲೂಕಿನ ಭವಾನಿ ಬಿಜಲಗಾಂವದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮದಲ್ಲಿ ಶಾಸಕ ಪ್ರಭು ಚವ್ಹಾಣ್ ಭಜನೆ ತಂಡದೊAದಿಗೆ ಹೆಜ್ಜೆ ಹಾಕಿ ಗಮನ ಸೆಳೆದರು.
Published on

ಔರಾದ್: ಭವಾನಿ ಬಿಜಲಗಾಂವ ದೇವಸ್ಥಾನ ಪುರಾತನ ಮತ್ತು ಐತಿಹಾಸಿಕ ಹಿನ್ನೆಲೆ ಹೊಂದಿರುವ ದೇವಸ್ಥಾನವಾಗಿದ್ದು, ಭವಾನಿ ಮಾತೆ ಶಕ್ತಿಶಾಲಿ ದೇವತೆ ಕಷ್ಟದಲ್ಲಿರುವ ಭಕ್ತರ ಸಮಸ್ಯೆ ನಿವಾರಣೆ ಮಾಡುವ ಮಹಾನ್ ಜಗನ್ಮಾತೆ ಆಗಿದ್ದಾರೆ ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.

ತಾಲೂಕಿನ ಭವಾನಿ ಬಿಜಲಗಾಂವದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿ, ಕ್ಷೇತ್ರದ ಜನತೆಯ ಒಳತಿಗಾಗಿ ಪ್ರಾರ್ಥಿಸಿ ಮಾತನಾಡಿದ ಅವರು, ದೇವಸ್ಥಾನದಲ್ಲಿ ಪ್ರತಿವರ್ಷ ನವರಾತ್ರಿ ಮಹೋತ್ಸವದ ನಿಮಿತ್ತ ಅಖಂಡ ಹರಿನಾಮ ಸಪ್ತಾಹ ನಡೆಸುತ್ತಾ ಬಂದಿರುವುದು ಉತ್ತಮ ಕೆಲಸವೆಂದು ವರ್ಣಿಸಿದರು. ಸಪ್ತಾಹವು ಯುವಕರಲ್ಲಿ ನಮ್ಮ ದೇಶದ ಕಲೆ, ಪರಂಪರೆಯನ್ನು ತಿಳಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಜನಾ ತಂಡದೊಂದಿಗೆ ಹೆಜ್ಜೆ ಹಾಕಿ ಗಮನ ಸೆಳೆದರು. ರಾಮಶೆಟ್ಟಿ ಪನ್ನಾಳೆ, ಶಿವಜಿರಾವ ಪಾಟೀಲ್ ಮುಂಗನಾಳ, ಸಂಜು ವಡೆಯರ, ದಯಾನಂದ ಘೂಳೆ, ಶಿವರಾಜ ಅಲ್ಮಾಜೆ, ವೆಂಕಟರಾವ ಡೊಂಬಾಳೆ, ಬಾಲಾಜಿ ಡೊಂಬಾಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net