‘ ಯಾವನೋ ಕಿತ್ತೋದ್ ನನ್..’ ಜಗ್ಗೇಶ್ ಮಾತಿಗೆ ಉತ್ತರ ಕೊಟ್ಟ ವರ್ತೂರು

varthursanthosh
Published on

ಬೆಂಗಳೂರು: ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ನಟ ಜಗ್ಗೇಶ್‌ ಹುಲಿ ಉಗುರು ಪ್ರಕರಣದ ಬಗ್ಗೆ  ವರ್ತೂರು ಸಂತೋಷ್ ಅವರನ್ನು ನಿಂದಿಸಿದ್ದರು. ಇದೀಗ  ವರ್ತೂರು ಸಂತೋಷ್ ಮಾತನಾಡಿದ್ದಾರೆ.

ಇತ್ತೀಚೆಗಷ್ಟೆ  ‘ರಂಗನಾಯಕ’ ಸಿನಿಮಾದ ಕಾರ್ಯಕ್ರಮದಲ್ಲಿ ಹುಲಿ ಉಗುರು ಪ್ರಕರಣದ ಬಗ್ಗೆ ಮಾತನಾಡಿದ್ದ ನಟ ಜಗ್ಗೇಶ್, ‘ನಾನು ಹುಲಿ ಥರಹ ಬದುಕಬೇಕು ಅಂತ ನಮ್ಮಮ್ಮ ಹುಲಿ ಉಗುರಿನ ಪೆಂಡೆಂಟ್ ಕೊಟ್ಟರು, ಆದರೆ ಯಾವನೋ ಕಿತ್ತೋದ್ ನನ್ ಮಗ ನಿಜವಾದ ಹುಲಿ ಉಗುರು ಹಾಕ್ಕೊಂಡು ಟಿವಿಗೆ ಹೋಗಿ ಅಲ್ಲಿ ತಗಲಾಕ್ಕೊಂಡ ಎಂದು ಜಗ್ಗೇಶ್  ಹೇಳಿದ್ದಾರೆ.

ಜಗ್ಗೇಶ್ ಅವರು ವರ್ತೂರು ಸಂತೋಷ್​ಗೆ ‘ಕಿತ್ತೋದ್ ನನ್ನ ಮಗ’ ಎಂಬ ಪದ ಬಳಸಬಾರದಿತ್ತು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದರು. ಜಗ್ಗೇಶ್​ರ ಹೇಳಿಕೆಗೆ ಪ್ರತಿಕ್ರಿಯಿಸಿರುವ ವರ್ತೂರು ಸಂತೋಷ್, ‘ಬಿಡಿ ಅವರು ದೊಡ್ಡವರು. ನಾನು ಹೇಳಲಿಚ್ಛಿಸುವುದು ಇಷ್ಟೆ, ‘ಕಾಲೈ ತಸ್ಮೈ ನಮಃ’ ಅಷ್ಟೆ. ಎಲ್ಲಾದಕ್ಕೂ ಉತ್ತರ ಕೊಡಲೇ ಬೇಕು ಅಂತೇನೂ ಇಲ್ಲ. ಕೆಲವೊಂದಕ್ಕೆ ಉತ್ತರ ಕೊಡಬೇಕು. ಕೆಲವೊಂದಕ್ಕೆ ಮೌನವಾಗಿದ್ದರೆ ಸಾಕು ಉತ್ತರ ಸಿಗುತ್ತದೆ’ ಎಂದಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ವರ್ತೂರ್‌ ಸಂತೋಷ್‌,  ಸುದೀಪಣ್ಣನ ಬಳಿ ನಾನು ಕೆಲವೊಂದು ವಿಚಾರಗಳನ್ನು ಕಲಿತಿದ್ದೀನಿ. ಕೆಲವೊಮ್ಮೆ ಮಾತನಾಡದೇ ಸುಮ್ಮನಿದ್ದರೆ ಆ ಸೈಲೆಂಟ್ ಉತ್ತರ ಕೊಡುತ್ತೆ ಅಂತ. ಅಷ್ಟೇ ಸಾಕು. ಕೆಲವು ಜಾಗಗಳಲ್ಲಿ ಮಾತನಾಡಲೇಬೇಕು ಸಂದರ್ಭ ಆ ತರ ಇರುತ್ತದೆ. ತೂಕದ ಜೊತೆ ತೂಕವನ್ನು ಅಳೆಯಬೇಕಾದರೆ ತೂಕಕ್ಕೆ ತೂಕ ಸರಿ ಇರಬೇಕು’ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net