ಬಿಗ್ ಬಾಸ್​ನಿಂದ ಜಗದೀಶ್ ಮತ್ತು ರಂಜಿತ್ ಔಟ್! ಕೈ-ಕೈ ಮಿಲಾಯಿಸಿದ Bigg Boss ಸ್ಪರ್ಧಿಗಳು

jagadish and ranjith out
Published on

ಬೆಂಗಳೂರು:  ಖಾಸಗಿವಾಹಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ​ಬಾಸ್​​ ( Bigg Boss ) ಕಾರ್ಯಕ್ರಮ ಉತ್ತಮವಾಗಿ ಮೂಡಿ ಬರುತ್ತಿದೆ. ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಿರುವ ಬಿಗ್​ಬಾಸ್​ ಕಾರ್ಯಕ್ರಮದಿಂದ  ಲಾಯರ್ ಜಗದೀಶ್ ಹಾಗೂ ರಂಜಿತ್ ಹೊರ ಬಿದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮನೆಯಲ್ಲಿ ಹೊಡೆದಾಡಿಕೊಂಡ ಹಿನ್ನೆಲೆಯಲ್ಲಿ ಇಬ್ಬರೂ ಔಟ್ ಆಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಕುರಿತಾಗಿ ಯಾವುದೇ ಖಚಿತ ಮಾಹಿತಿ ಇಲ್ಲ...

ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಕಿತ್ತಾಟ ಜೋರಾಗಿದೆ. ಇದರಿಂದ ಇಡೀ ಮನೆಯ ವಾತಾವರಣ ಹದಗೆಡುತ್ತಿದೆ. ಪ್ರತಿ ವಿಚಾರಕ್ಕೆ ಜಗದೀಶ್ ಅವರು ಮೂಗು ತೂರಿಸುತ್ತಿದ್ದಾರೆ. ಇದು ಮನೆಯವರಿಗೆ ಇಷ್ಟ ಆಗುತ್ತಿಲ್ಲ. ಹೀಗಾಗಿ ಜಗದೀಶ್​​ ಅವರು ಹಾಗೂ ಇನ್ನಿತರ ಸ್ಪರ್ಧಿಗಳ ನಡುವೆ ಜಗಳ ಪರ- ವಿರೋಧ ಚರ್ಚೆಯಾಗಿ ಕೊನೆಗೆ ಕಿತ್ತಾಡುವ ಹಂತಕ್ಕೆ ತಲುಪುತ್ತಿದೆ.

ಜಗದೀಶ್ ಹಾಗೂ ಮಂಜು ಏಕವಚನದಲ್ಲಿ ಕೂಗಾಡಿಕೊಂಡಿದ್ದಾರೆ. ಬಿಗ್ ಬಾಸ್​​ನ ಆದೇಶಕ್ಕೂ ಯಾರೂ ಕಿಮ್ಮತ್ತು ಕೊಟ್ಟಿಲ್ಲ. ಆ ಬಳಿಕ ಬಿಗ್ ಬಾಸ್ ‘ಸದ್ದು’ ಎಂದು ಕೂಗಿದ್ದಾರೆ. ಯಾರು ತುಟಿಕ್​ ಪಿಟಿಕ್​ ಎನ್ನದೆ ಸುಮ್ಮನೆ ಕುಳಿತುಕೊಳ್ಳಿ ಎಂದು ಬಿಗ್​ಬಾಸ್​​ ಹೇಳಿದ್ದಾರೆ. ಆ ಬಳಿಕ ಎಲ್ಲರೂ ಶಾಂತರಾದರು.

ರಂಜಿತ್ ಮತ್ತು ಜಗದೀಶ್ ನಡುವೆ ನೇರಾನೇರ ಜಗಳ ಆಗಿತ್ತು. ಕೆಲವು ಪ್ರಾಥಮಿಕ ಮಾಹಿತಿ ಪ್ರಕಾರ ಮತ್ತೊಬ್ಬ ಸ್ಪರ್ಧಿ ಮಾನಸಾ ಅವರ ವಿಚಾರಕ್ಕೆ ಜಗಳ ಆಗಿದೆ ಎನ್ನಲಾಗಿದೆ. ಈ ಮೂಲಕ ಕನ್ನಡ ಬಿಗ್​ಬಾಸ್​ ಇತಿಹಾಸದಲ್ಲಿ ಜಗಳ ಆಡಿಕೊಂಡು ಸ್ಪರ್ಧಿಗಳು ಹೊರಬಿದ್ದ ಎರಡನೇ ಪ್ರಕರಣ ಇದಾಗಿದೆ. ಈ ಹಿಂದೆ ಹುಚ್ಚ ವೆಂಕಟ್​ ಬಿಗ್​ಬಾಸ್ ಮನೆಯಿಂದ ಔಟ್ ಆಗಿದ್ದರು. ​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net