ಇವರೆಲ್ಲಾ ‘ಬಿಗ್ ಬಾಸ್’ ಮನೆಗೆ ಹೋಗೋದು ಪಕ್ಕಾ ಅಂತೆ! ಅಧಿಕೃತ ಘೋಷಣೆಯೊಂದೇ ಬಾಕಿ...

big boss
Published on

ಬೆಂಗಳೂರು:  ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11ಕ್ಕೆ ಗ್ರ್ಯಾಂಡ್​ ಆಗಿ ಎಂಟ್ರಿ ಕೊಡಲು ಸಲೆಬ್ರೆಟಿಗಳು ಸಜ್ಜಾಗಿದ್ದಾರೆ. ಬಿಗ್​ಬಾಸ್​​ ಮನೆಗೆ ಯಾರೆಲ್ಲ ಎಂಟ್ರಿ ಕೊಡ್ತಾರೆ ಎನ್ನುವುದು ವೀಕ್ಷಕರಲ್ಲಿ ಸಾಮಾನ್ಯವಾಗಿ ಇರುವ ಕೂತುಹಲವಾಗಿದೆ. ಆದರೆ ಸೋಶಿಯಲ್​​ ಮೀಡಿಯಾದಲ್ಲಿ ಕೆಲವು ಜನರ ಹೆಸರು ಓಡಾಡುತ್ತಿದೆ. ಯಾರ್ಯಾರ ಹೆಸರು ಚಾಲ್ತಿಯಲ್ಲಿದೆ ಎನ್ನುವ ಮಾಹಿತಿಯನ್ನು ನಾವು ಇಂದು ನಿಮಗೆ ನೀಡಲಿದ್ದೇವೆ.

ಪ್ರೇಮಾ ಅವರು ಈ ಬಾರಿಯ ಬಿಗ್‌ ಬಾಸ್‌ ಸೀಸನ್‌‌ 11ಕ್ಕೆ ಗ್ರ್ಯಾಂಡ್‌ ಎಂಟ್ರಿ ಕೊಡ್ತಿದ್ದಾರೆ ಎನ್ನಲಾಗುತ್ತಿದೆ.

ಸ್ಯಾಂಡಲ್​ವುಡ್​ ನಟ ಪಂಕಜ್ ನಾರಾಯಣ್  ಬಿಗ್‌ ಬಾಸ್‌ ಸೀಸನ್‌‌ 11ಕ್ಕೆ ಗ್ರ್ಯಾಂಡ್‌ ಎಂಟ್ರಿ ಕೊಡ್ತಿದ್ದಾರೆ . ಇವರು ನಿರ್ದೇಶಕ, ನಿರ್ಮಾಪಕ, ನಟ ಹಾಗೂ ಚಿತ್ರ ಸಾಹಿತಿ ಎಸ್ ನಾರಾಯಣ್ ಅವರ ಪುತ್ರ.

‘ಗೀತಾ’ ಧಾರಾವಾಹಿಯಲ್ಲಿ ಅಭಿನಯಿಸಿ ಗಮನ ಸೆಳೆದಿರುವ ನಟಿ ಭವ್ಯಾ ಗೌಡ ಅವರ ಹೆಸರು ಕೂಡ ಬಿಗ್ ಬಾಸ್ ಸ್ಪರ್ಧಿಯ ಲಿಸ್ಟ್‌ನಲ್ಲಿ ಬರುತ್ತಿದೆ.

ಮಂಜು ಪಾವಗಡ, ವಿನೋದ್ ಗೊಬ್ರಗಾಲ ‘ಬಿಗ್ ಬಾಸ್’ ಮನೆ ಪ್ರವೇಶಿಸಿದ್ದರು. ಈ ಬಾರಿ ‘ಬಿಗ್ ಬಾಸ್’ ಮನೆಗೆ ಹುಲಿ ಕಾರ್ತಿಕ್‌ ಎಂಟ್ರಿ ಕೊಡಬಹುದು ಎನ್ನಲಾಗುತ್ತಿದೆ.

 Huli Kartik

ಹಿಂದಿನ ಸೀಸನ್‌ನಲ್ಲಿ ಪತ್ರಕರ್ತ ಗೌರೀಶ್‌ ಅಕ್ಕಿ ಸ್ಪರ್ಧಿಯಾಗಿದ್ದರು. ಪತ್ರಕರ್ತರ ನ್ಯೂಸ್ ಆ್ಯಂಕರ್‌ ಹರೀಶ್ ನಾಗರಾಜ್ ಕೂಡ ಈ ಸೀಸನ್‌ ಎಂಟ್ರಿ ಕೊಟ್ತಿದ್ದಾರೆ ಎನ್ನಲಾಗ್ತಿದೆ.

ಅವಳಿ ಸಹೋದರಿಯರು ಅದ್ವಿತಿ ಶೆಟ್ಟಿ ಹಾಗೂ ಅಶ್ವಿತಿ ಶೆಟ್ಟಿ . ಇದಿಗ ಬಿಗ್‌ ಬಾಸ್‌ಗೆ ಬರ್ತಿದ್ದಾರೆ ಎನ್ನಲಾಗಿದೆ.

ಐಶ್ವರ್ಯಾ ರಂಗರಾಜನ್ ಇವರು ಖ್ಯಾತ ಗಾಯಕಿ. ಇದೀಗ ಐಶ್ವರ್ಯಾ ಅವರು ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗಿದೆ.

ನಟ ವರುಣ್‌ ಆರಾಧ್ಯ ಕೂಡಾ ಸ್ಪರ್ಧಿಯಾಗಿ ಹೋಗಬಹುದು ಎಂಬ ಮಾತು ಕೇಳಿ ಬರುತ್ತಿದೆ.

ಸಂಭಾವ್ಯ ಪಟ್ಟಿಯಲ್ಲಿ ಒಲವಿನ ನಿಲ್ದಾಣ’ ಸೀರಿಯಲ್‌ನಲ್ಲಿ ಸಿದ್ಧಾಂತ್ ಪಾತ್ರದ ಮೂಲಕ ಗಮನ ಸೆಳೆದ ಅಕ್ಷಯ್ ನಾಯಕ್ . ನಟಿ ಸುಕೃತಾ ನಾಗ್, ಗೌತಮಿ ಜಾಧವ್, ಆಶಾ ಭಟ್​, ಚಂದ್ರಪ್ರಭ, ತ್ರಿವಿಕ್ರಮ್​ ಹೀಗೆ ಅನೇಕ  ಹೆಸರುಗಳೂ ಇವೆ.

ಕೆಲವು ಹೈ ಪ್ರೊಫೈಲ್ ಪರ್ಸನಾಲಿಟಿಗಳು ಇರಲಿ ಎಂದು ಕನ್ನಡ ವಾಹಿನಿಯ ಮ್ಯಾನೇಜ್ಮೆಂಟ್ ನಿಶ್ಚಿಯಿಸಿದೆಯಂತೆ.  ವಾಹಿನಿ ಕಡೆಯಿಂದ ಅಥವಾ ಕಂಟೆಸ್ಟಂಟ್ ಗಳ ಕಡೆಯಿಂದ ಮಾಹಿತಿ ಸಿಗಲಿ, ಬಿಡಲಿ, ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಕೆಲವು ಹೆಸರುಗಳು ಚರ್ಚೆಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net