

ಬೆಂಗಳೂರು: ಖಾಸಗಿವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ( Bigg Boss ) ಕನ್ನಡ ಸೀಸನ್ 11 ರ ಗ್ರ್ಯಾಂಡ್ ಓಪನಿಂಗ್ ಇದೇ ಸೆಪ್ಟೆಂಬರ್ 29 ರಂದು ನಡೆಯಲಿದೆ. ಬಿಗ್ ಬಾಸ್ ಆರಂಭಕ್ಕೆ ಕೇವಲ ಗಂಟೆ ಬಾಕಿಯಿರುವಾಗ ಸ್ಪರ್ಧಿಗಳ ಹೆಸರು ಲೀಕ್ ಆಗಿದೆ. ಈ ಬಾರಿ ಸ್ವರ್ಗ ಹಾಗೂ ನರಕ ಥೀಮ್ನಲ್ಲಿ ಯಾವ ಸ್ಪರ್ಧಿ ಯಾರು ಎಲ್ಲಿ ಹೋಗಿದ್ದಾರೆ ಎನ್ನುವ ಮಾಹಿತಿ ಕೂಡಾ ಮೂಲಗಳಿಂದ ತಿಳಿದು ಬಂದಿದೆ.
ರಾಜಾ ರಾಣಿ ಫಿನಾಲೆಯಲ್ಲಿ ಗೌತಮಿ ಜಾಧವ್, ಲಾಯರ್ ಜಗದೀಶ್, ಚೈತ್ರಾ ಕುಂದಾಪುರ ಹಾಗೂ ಗೋಲ್ಡ್ ಸುರೇಶ್ ಅವರ ಹೆಸರುಗಳು ಘೋಷಣೆಯಾಗಿದೆ. ಇವರಲ್ಲಿ ಲಾಯರ್ ಜಗದೀಶ್ ಮತ್ತು ಗೌತಮಿ ಜಾಧವ್ ಅವರುಗಳು ಸ್ವರ್ಗಕ್ಕೆ ಹೋಗಲಿದ್ದು, ಚೈತ್ರಾ ಕುಂದಾಪುರ ಮತ್ತು ಗೋಲ್ಡ್ ಸುರೇಶ್ ಅವರುಗಳು ನರಕಕ್ಕೆ ಹೋಗಲಿದ್ದಾರಂತೆ.
ಇವರೆಲ್ಲರೂ ಸ್ವರ್ಗದಲ್ಲಿ ಇರಲಿದ್ದಾರಂತೆ :
ಗಿಚ್ಚಿ ಗಿಲಿ-ಗಿಲಿ ಧನರಾಜ್ . ನಟರಾದ ಕೀರ್ತಿ ಧರ್ಮರಾಜ್ . ನಟ ಉಗ್ರಂ ಮಂಜು ಸಹ ಈ ಬಾರಿ ಬಿಗ್ಬಾಸ್ ಮನೆಗೆ ಹೋಗಲಿದ್ದಾರೆ. ನಟಿಯರಾದ ಯಮುನಾ, ಭವ್ಯ, ಐಶ್ವರ್ಯಾ, ತ್ರಿವಿಕ್ರಮ್ ಮತ್ತು ಹಂಸ ಅವರುಗಳು ಸಹ ಬಿಗ್ಬಾಸ್ ಮನೆಯಲ್ಲಿದ್ದು, ಇವರೆಲ್ಲರೂ ಸ್ವರ್ಗದಲ್ಲಿ ಇರಲಿದ್ದಾರಂತೆ.
ಇವ್ರೆ ನರಕದಲ್ಲಿರುವ ಸ್ಪರ್ಧಿಗಳು:
ನಟ ಶಿಶಿರ ನಟಿ ಮೋಕ್ಷಿತ ಹಾಗೂ ಕಳೆದ ಬಾರಿ ಬಿಗ್ಬಾಸ್ಗೆ ಹೋಗಿದ್ದ ತುಕಾಲಿ ಸಂತೋಷ್ ಅವರ ಪತ್ನಿ ತುಕಾಲಿ ಮಾನಸ, ರಂಜಿತಾ, ಚೈತ್ರಾ ಕುಂದಾಪುರ ಹಾಗೂ ಗೋಲ್ಡ್ ಸುರೇಶ್ ಸಹ ನರಕದಲ್ಲಿ ಇರಲಿದ್ದಾರೆ.