ಶಿರಸಿಯಲ್ಲಿ ಬೃಹತ್ ವೇದ ಶೋಭಾಯಾತ್ರೆ

veda shoba yatre
Published on

ಶಿರಸಿ: ತಾಲೂಕಿನ ಸೊಂದಾ ಸ್ವರ್ಣವಲ್ಲೀ ಮಠದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ದಕ್ಷಿಣ ಭಾರತ ಕ್ಷೇತ್ರೀಯ ವೇದ ಸಮ್ಮೇಳನದ ಅಂಗವಾಗಿ ಶನಿವಾರ ನಗರದಲ್ಲಿ ಬೃಹತ್ ವೇದ ಶೋಭಾಯಾತ್ರೆ ಜರುಗಿತು.

ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ನೆಲೆಮಾಂವು ಮಠದ ಶ್ರೀ ಮಾಧವಾನಂದ ಸರಸ್ವತೀ ಸ್ವಾಮೀಜಿ ಹಾಗೂ ಕೂಡಲಿ ಮಠದ ಶ್ರೀ ಅಭಿನವ ಶಂಕರ ಭಾರತಿ ಸ್ವಾಮೀಜಿ, ಶ್ರೀ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ನೀಡಿದರು.

ಮಾರಿಕಾಂಬಾ ದೇವಸ್ಥಾನದಿಂದ ಪ್ರಾರಂಭವಾದ ವೇದ ಶೋಭಾಯಾತ್ರೆಯು ಶಿವಾಜಿ ಚೌಕ, ಹಳೇ ಬಸ್ ನಿಲ್ದಾಣ ವೃತ್ತ, ಸಿ.ಪಿ ಬಜಾರ್, ದೇವಿಕೆರೆ ಮೂಲಕ ಸಾಗಿ ಯೋಗಮಂದಿರ ತಲುಪಿತು. ವೇದ ಶೋಭಾಯಾತ್ರೆಯ ದಾರಿಯುದ್ದಕ್ಕೂ ಮಂತ್ರಪಠಣ, ಶ್ರೀರಾಮ ನಾಮ ಸ್ಮರಣೆ, ಭಜನೆ ಮಾಡಲಾಯಿತು. ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿ 4 ಸಾವಿರಕ್ಕೂ ಅಧಿಕ ಜನರು ವೇದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net