

ಶಿರಸಿ: ಶಿರಸಿ ಅರಣ್ಯ ವಿಭಾಗದ ವಾಹನದ ಮೇಲೆ ಯುವತಿಯೊಬ್ಬಳು ವಿವಿಧ ಭಂಗಿಯಲ್ಲಿ ಕುಳಿತು ಫೋಟೋ ಶೂಟ್ ಮಾಡಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಯಲ್ಲಾಪುರ ಎಸಿಎಫ್ಗೆ ಸೇರಿದ ವಾಹನ ಮೇಲೆ ಯುವತಿ ಕುಳಿತು ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ. ಸರ್ಕಾರಿ ವಾಹನವನ್ನು ಫೋಟೋ ಶೂಟ್ಗೆ ಬಳಸಿಕೊಂಡ ಬಗ್ಗೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ. ಫೋಟೋ ಶೂಟ್ ಮಾಡಿಸಿಕೊಂಡವರ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರಿನಿಂದ ಬಂದ ಅಧ್ಯಯನ ತಂಡವನ್ನು ಮುಂಡಗೋಡಕ್ಕೆ ಬಿಡಲು ವಾಹನ ಕೊಂಡೊಯ್ಯಲಾಗಿತ್ತು. ಇನ್ಶೂರೆನ್ಸ್ ಮುಗಿದ ಕಾರಣ ಚಾಲಕ ರಸ್ತೆ ಬದಿ ನಿಲ್ಲಿಸಿ ಬೇರೆ ವಾಹನದ ಮೂಲಕ ಕರೆದೊಯ್ದಿದ್ದ. ರಸ್ತೆಯಲ್ಲಿ ಬಂದವರು ವಾಹನದ ಮೇಲೆ ಹತ್ತಿ ಫೋಟೋ ಶೂಟ್ ಮಾಡಿದ್ದು, ಪ್ರಕರಣ ದಾಖಲಿಸಲಾಗಿದೆ. | ಗೋಪಾಲಕೃಷ್ಣ ಹೆಗಡೆ ಯಲ್ಲಾಪುರ ಡಿಎಫ್ಒ