ಹಸಿರು ವಲಯ ಉಡುಪಿಗೆ ಬಿಗ್ ಶಾಕ್: ಐವರಿಗೆ ಕರೊನಾ ಪಾಸಿಟಿವ್

Corona Test
Published on

ಉಡುಪಿ: ಹಸಿರು ವಲಯದಲ್ಲಿದ್ದ ಉಡುಪಿಗೆ ಬಿಗ್ ಶಾಕ್ ಎದುರಾಗಿದೆ. ಜಿಲ್ಲೆಯಲ್ಲಿ ಶುಕ್ರವಾರ ಐದು ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.

ಮೇ.13 ರಂದು ಉಡುಪಿಗೆ ದುಬೈನಿಂದ ಆಗಮಿಸಿದ್ದವರನ್ನು ಹೊಟೆಲ್ ಕ್ವಾರಂಟೈನ್ ಇರಿಸಲಾಗಿತ್ತು. ಮೇ.13 ರಂದು ಸಾಯಂಕಾಲ ಗಂಟಲದ್ರವ ತೆಗೆದು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಐವರಲ್ಲಿ ಕರೊನಾ ವೈರಸ್ ಇರುವುದು ದೃಡಪಟ್ಟಿದೆ. 52, 31, 37 ವರ್ಷದ ಮೂವರೂ ಪುರುಷರು, 33, 38 ವರ್ಷದ ಇಬ್ಬರು ಮಹಿಳೆಯರಿಗೆ ಸೋಂಕು ತಗುಲಿದೆ.‌ ಸದ್ಯ ಈ ಸೊಂಕಿತರನ್ನು ಹೊಟೆಲ್ ಕ್ವಾರಂಟೈನ್ ನಿಂದ ಕೋವಿಡ್ -19 ವಿಶೇಷ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೇ.13 ರಂದು ದುಬೈನಿಂದ 13/5ಎಕ್ಸ್ ವಿಮಾನದಲ್ಲಿ ಆಗಮಿಸಿದ್ದ 49 ಜನರಲ್ಲಿ ಐವರಿಗೆ ಸೋಂಕು ಇರುವುದು ದೃಡಪಟ್ಟಿದೆ. ಇವರನ್ನು ಪ್ರತ್ಯೇಕ ಕೋವಿಡ್- 19 ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರ ಆರೋಗ್ಯ ತಪಾಸಣೆ, ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

ಇಷ್ಟು ದಿನ ಹಸಿರು ವಲಯದಲ್ಲಿದ್ದ ಉಡುಪಿ ಜಿಲ್ಲೆಯ ಜನತೆಗೆ ಮತ್ತೆ ಆತಂಕ ಎದುರಾಗಿದೆ. ಈ ಹಿಂದೆ ಜಿಲ್ಲೆಯಲ್ಲಿ ಮೂವರು ಪುರುಷರಲ್ಲಿ ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಮೂವರು ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರು‌ ಬಳಿಕ ಸಾಕಷ್ಟು ದಿನಗಳ ಬಳಿಕ ಜಿಲ್ಲೆಯಲ್ಲಿ ಯಾವುದೇ ಕೊವಿಡ್ -19 ಪ್ರಕರಣ ಪತ್ತೆಯಾಗದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜಿಲ್ಲೆಯನ್ನು ಹಸಿರು ವಲಯಕ್ಕೆ ಸೇರ್ಪಡೆ ಮಾಡಿತ್ತು. ಇದೀಗ ಒಮ್ಮೆಲೆ ಐದು ಪ್ರಕರಣಗಳು ಪತ್ತೆ ಯಾಗಿರುವುದರಿಂದ ಮತ್ತೆ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net