

ಹುಬ್ಬಳ್ಳಿ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಬಂದಾದ ಗೃಹಲಕ್ಷ್ಮಿ ಯೋಜನೆ ವ್ಯಾಪ್ತಿಗೆ ಒಳಪಡಲು ಮನೆಯ ಒಡತಿಯರು ಪರದಾಡುತ್ತಿದ್ದಾರೆ.
ಕರ್ನಾಟಕ ಒನ್, ಕಾಮನ್ ಸರ್ವಿಸ್ ಸೆಂಟರ್ ಗಳ ಮುಂದೆ ಮಳೆಯಲ್ಲೇ ಕಾದು ನಿಲ್ಲುತ್ತಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಕೆಲಸ ಕಾರ್ಯ ಬಿಟ್ಟು ಅನೇಕ ಜನರು ಸರದಿಯಲ್ಲಿ ಕಾಯುತ್ತಿದ್ದ ದೃಶ್ಯ ನಗರದ ವಿವಿಧ ಕೇಂದ್ರಗಳ ಮುಂದೆ ಕಂಡು ಬಂತು.
ಮನೆಯೊಡತಿಗೆ ಪ್ರತಿ ತಿಂಗಳು ಎರಡು ಸಾವಿರ ನೀಡುವ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಜುಲೈ ೧೭ ರಿಂದ ಚಾಲನೆ ನೀಡಲಾಗಿದೆ. ಅರ್ಜಿ ಸಲ್ಲಿಸಲು ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಬರುತ್ತಿರುವುದರಿಂದ ಜನದಟ್ಟಣೆ ಉಂಟಾಗುತ್ತಿದೆ.
ಕೆಲವು ಕೇಂದ್ರಗಳಲ್ಲಿ ಜಾಗವಿಲ್ಲದೆ ರಸ್ತೆ ಮಧ್ಯ ಮಳೆಯಲ್ಲಿ ನಿಲ್ಲಬೇಕಾಗಿದೆ. ಕೆಲವೆಡೆ ಟೋಕನ್ ನೀಡಿ ಕೆಲ ಹೊತ್ತು ಬಿಟ್ಟು ಬರಲು ಸೂಚಿಸಲಾಗುತ್ತಿದೆ.