ಬೃಹತ್ ಪಂಜಿನ ಮೆರವಣಿಗೆ ಇಂದು

ಕುಶಾಲನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಎಲ್.ಹರೀಶ್ ಮಾತನಾಡಿದರು  ದಿನೇಶ್, ಪ್ರಶಾಂತ್, ಪ್ರಜ್ವಲ್, ಆಶ್ರಿತ, ರಾಜೀವ್ ಇದ್ದರು.
ಕುಶಾಲನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಎಲ್.ಹರೀಶ್ ಮಾತನಾಡಿದರು ದಿನೇಶ್, ಪ್ರಶಾಂತ್, ಪ್ರಜ್ವಲ್, ಆಶ್ರಿತ, ರಾಜೀವ್ ಇದ್ದರು.
Published on

ಕುಶಾಲನಗರ: ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ ಆ.14ರಂದು ಸಂಜೆ ಬೃಹತ್ ಪಂಜಿನ ಮೆರವಣಿಗೆ ಆಯೋಜಿಸಲಾಗಿದೆ ಎಂದು ಹಿಂದು ಜಾಗರಣಾ ವೇದಿಕೆ ಮಾಹಿತಿ ಸಂಪರ್ಕ ಪ್ರಮುಖ ಎಲ್.ಹರೀಶ್ ತಿಳಿಸಿದ್ದಾರೆ.

ಜನಜಾಗೃತಿಗಾಗಿ ಅಂದು ಸಂಜೆ 6.30 ಕ್ಕೆ ಕುಶಾಲನಗರದ ಬೈಚನಹಳ್ಳಿ ಗ್ರಾಮದ ಮಾರಿಯಮ್ಮ ದೇವಾಲಯದಿಂದ ಅಖಂಡ ಭಾರತ ಸಂಕಲ್ಪ ದಿನವನ್ನು ಸ್ಮರಿಸುವ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಹಿಂದುಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಲಿದ್ದು, ರೈತ ಸಹಕಾರ ಭವನದಲ್ಲಿ ಹಾ.ತಿ.ಜಯಪ್ರಕಾಶ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಹಿಂದು ಜಾಗರಣಾ ವೇದಿಕೆ ತಾಲೂಕು ಸಂಯೋಜಕ ದಿನೇಶ್, ತಾಲೂಕು ಸಹ ಸಂಯೋಜಕ ವಿ.ಎಚ್.ಪ್ರಶಾಂತ್, ತಾಲೂಕು ಸಹ ಸಂಯೋಜಕ ಎಂ.ಎನ್.ಪ್ರಜ್ವಲ್, ತಾಲೂಕು ಸದಸ್ಯ ಆಶ್ರಿತ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net