

ಧಾರವಾಡ: ಬಿಗ್ ಮಿಶ್ರಾದ ವತಿಯಿಂದ ಉತ್ತರ ಕರ್ನಾಟದಲ್ಲೇ ಅತಿ ದೊಡ್ಡ ಸಸ್ಯಾಹಾರಿ ಉಪಹಾರ ಗೃಹವನ್ನು ಇಲ್ಲಿಯ ಹು-ಧಾ ಬೈಪಾಸ್‌ನ ಯರಿಕೊಪ್ಪ ಕ್ರಾಸ್ ಬಳಿ ಆರಂಭಿಸಲಾಗಿದ್ದು, ಅ. ೨೩ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಬಿಗ್ ಮಿಶ್ರಾ ಪೇಢಾ ಕಂಪನಿಯ ವ್ಯವಸ್ಥಾಪಕ ಶ್ರೀಧರ ಬೋರಕರ ಹೇಳಿದರು.
ನಗರದ ನೂತನ ಮಳಿಗೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಉಪಹಾರ ಗೃಹದಲ್ಲಿ ಸಿಹಿತಿನಿಸು, ನಮಕೀನ್ ತಿನಿಸು, ಊಟ, ಉಪಹಾರ, ಚಾಟ್ಸ್, ಜ್ಯೂಸ್ ಮತ್ತು ಐಸ್‌ಕ್ರೀಂ ಸವಿಯಬಹುದು. ಸುಮಾರು ೪೦೦ಕ್ಕೂ ಹೆಚ್ಚು ಜನರು ಕುಳಿತುಕೊಳ್ಳಬಹುದಾದ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಬೇಕರಿ ಕ್ಷೇತ್ರದಲ್ಲಿ ೧೮೫ ಮಳಿಗೆ ಆರಂಭಿಸಿರುವ ಬಿಗ್ ಮಿಶ್ರಾ ತನ್ನ ರಾಷ್ಟಿçÃಯ ಹೆದ್ದಾರಿಯ ಯರಿಕೊಪ್ಪ ಕ್ರಾಸ್ ಬಳಿ ೧೮೬ನೇ ಉಪಹಾರ ಗೃಹವನ್ನು ಆರಂಭಿಸಿದೆ. ಗ್ರಾಹಕರು ಶುಚಿ- ರುಚಿಯಾದ ದಕ್ಷಿಣ ಭಾರತ, ಉತ್ತರ ಭಾರತದ ಊಟ ಹಾಗೂ ಉಪಹಾರದ ಜೊತೆ ಈ ಭಾಗದ ವಿಶೇಷ ಜೋಳದ ರೊಟ್ಟಿ ಎಣಗಾಯಿ ಊಟದ ರುಚಿ ಸವಿಯಬಹುದಾಗಿದೆ. ಅಲ್ಲದೆ, ಗ್ರಾಹಕರ ಎದುರೇ ತಯಾರಿಸುವ ಲೈವ್ ಪೇಢಾ ಸೆಂಟರ್ ಇರಲಿದ್ದು, ತಾಜಾ ಪೇಢಯ ರುಚಿಯನ್ನು ಸವಿಯಬಹುದು ಎಂದರು.
ಮಿಶ್ರಾ ಮನೆತನದ ಪೇಢಾ ಸಿಹಿತಿನಿಸು ತಯಾರಿಸುವ ಉದ್ಯೋಗ ಧಾರವಾಡದಲ್ಲಿ ೧೯೩೩ರಲ್ಲಿ ಆರಂಭಗೊAಡಿತು. ೧೯೬೯ರಲ್ಲಿ ೨ನೇ ತಲೆಮಾರಿನ ಗಣೇಶ ಅವದ್‌ಬಿಹಾರಿ ಮಿಶ್ರಾ, ಹುಬ್ಬಳ್ಳಿಯ ಭಂಡಿವಾಡ ಆಝಾದ್ ರಸ್ತೆಯಲ್ಲಿ ಚಿಕ್ಕ ಅಂಗಡಿಯೊAದರಲ್ಲಿ ಪೇಢಾ ತಯಾರಿಸಿ ಮಾರಾಟ ಆರಂಭಿಸಿ ಹುಬ್ಬಳ್ಳಿಗೂ ವ್ಯವಹಾರವನ್ನು ವಿಸ್ತರಿಸಿದ್ದರು. ಜನತೆಯ ಹೃದಯ ಗೆದ್ದು ಭಂಡಿವಾಡ ಬೇಸ್‌ನಲ್ಲಿನ ದೊಡ್ಡ ಅಂಗಡಿಗೆ ಸ್ಥಳಾಂತರಗೊAಡು `ಮಿಶ್ರಾ ಪೇಢೆ' ಹೆಸರಿನಿಂದ ಜನಪ್ರಿಯಗೊಂಡಿತು ಎಂದರು.
ನAತರ ವ್ಯಾಪಾರದ ಉಸ್ತುವಾರಿ ವಹಿಸಿಕೊಂಡ ೩ನೇ ತಲೆಮಾರಿನ ಸಂಜಯ ಮಿಶ್ರಾ ೧೯೯೬ರಲ್ಲಿ ಧಾರವಾಡ ಹೊರವಲಯದ ಕ್ಯಾರಕೊಪ್ಪದಲ್ಲಿ ಪೇಢೆ ಮತ್ತು ನಮಕೀನ್‌ಗಳನ್ನು ತಯಾರಿಸುವ ಘಟಕ ಸ್ಥಾಪಿಸಿದರು. ಸುಮಾರು ೨೦೦ಕ್ಕೂ ಹೆಚ್ಚು ತರಹೇವಾರಿ ಸಿಹಿತಿನಿಸು ಮತ್ತು ನಮಕೀನ್‌ಗಳ ಉತ್ಪಾದನೆ ಆರಂಭಿಸಿ ರಾಜ್ಯ, ರಾಷ್ಟç ಮಟ್ಟಕ್ಕೆ ವಿಸ್ತರಿಸಿದ್ದಾರೆ ಎಂದರು.
ಕ್ಯಾರಕೊಪ್ಪದ ೧೭ ಎಕರೆ ವಿಸ್ತೀರ್ಣದ ಘಟಕದಲ್ಲಿ ೧,೨೦೦ಕ್ಕೂ ಹೆಚ್ಚು ಜನರಿಗೆ ನೇರ ಹಾಗೂ ಪರೋಕ್ಷ ಉದ್ಯೋಗ ಕಲ್ಪಿಸಲಾಗಿದೆ. ಧಾರವಾಡ ಭೌಗೋಳಿಕ ಸೂಚಕ ಟ್ಯಾಗ್ ಹೊಂದಿರುವ ಧಾರವಾಡ ಪೇಢೆ ಜೊತೆಗೆ ನಮಕೀನ್ ಬೇಕರಿ ಉತ್ಪನ್ನಗಳನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಿ ರಾಜ್ಯ, ಹೊರರಾಜ್ಯಗಳಲ್ಲಿ ೧೮೫ ಮಾರಾಟ ಮಳಿಗೆಗಳ ಮುಖಾಂತರ ಗ್ರಾಹಕರಿಗೆ ತಲುಪಿಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗಿರಿಧರ ಲಡ್ಡಾ, ವಿಷ್ಣು ಭಾಂಡಗೆ, ಯೋಗೇಶ ಜೈನ್, ನವೀನ ಪವಾರ ಇದ್ದರು.