ಮುಂಡರಗಿಯಲ್ಲಿ ಬಿಗ್ ಮಿಶ್ರಾ ಪೇಢಾ ಮಳಿಗೆ ಶೀಘ್ರ ಆರಂಭ

13 MDG-1
Published on

ಮುಂಡರಗಿ: ಪಟ್ಟಣದ ಬಸ್‌ನಿಲ್ದಾಣ ಸಮೀಪದ ಶಿದ್ಲಿಂಗ ಕಾಂಪ್ಲೆಕ್ಸ್‌ನಲ್ಲಿ ಫೆ.14ರಂದು ಬೆಳಗ್ಗೆ 10ಗಂಟೆಗೆ ಬಿಗ್ ಮಿಶ್ರಾ ಪೇಢಾದ ನೂತನ ಶಾಖೆ ಪ್ರಾರಂಭವಾಗಲಿದೆ ಎಂದು ಧಾರವಾಡ ಬಿಗ್ ಮಿಶ್ರಾ ಪೇಢಾ ಪ್ರೈ.ಲಿ.ನ ಅಖಿಲ ಭಾರತ ಮಾರಾಟ ಪ್ರತಿನಿಧಿ ಶ್ರೀಧರ ಪಾಟೀಲ ತಿಳಿಸಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯರಾದ ಮಹೇಶ ನಾಗರಹಳ್ಳಿ ಮಾಲೀಕತ್ವದಲ್ಲಿ ನೂತನ ಶಾಖೆಯನ್ನು ತೆರೆಯಲಾಗುತ್ತಿದೆ. ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿ ಬಿಗ್ ಮಿಶ್ರಾ ಪೇಢಾದ ಶಾಖೆ ಉದ್ಘಾಟಿಸಲಿದ್ದಾರೆ. ಧಾರವಾಡ ಬಿಗ್ ಮಿಶ್ರಾದ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಮಿಶ್ರಾ ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.
1933ರಲ್ಲೇ ಪ್ರಾರಂಭಗೊಂಡ ಧಾರವಾಡ ಬಿಗ್ ಮಿಶ್ರಾ ಪೇಢಾ ಪ್ರೈ.ಲಿ. ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ಒಟ್ಟು 200 ಶಾಖೆಗಳನ್ನು ಹೊಂದಿದೆ. ಉತ್ತಮ ಗುಣಮಟ್ಟದ ವಿವಿಧ ಸಿಹಿ, ಖಾರಾ ಹಾಗೂ ಬೇಕರಿ ತಿನಿಸುಗಳು ಸೇರಿ ಒಟ್ಟು 1,200 ಬಗೆಯ ತಿನಿಸುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದರು.
ಸ್ಥಳೀಯ ಶಾಖೆಯ ಮಾಲೀಕ ಮಹೇಶ ನಾಗರಹಳ್ಳಿ ಮಾತನಾಡಿ, ಜನರಿಗೆ ಹೊಸತನ ಪರಿಚಯಿಸುವ ನಿಟ್ಟಿನಲ್ಲಿ ಬಿಗ್ ಮಿಶ್ರಾ ಪೇಢಾದ ಮಳಿಗೆ ತೆರೆಯಲಾಗುತ್ತಿದೆ. ಧಾರವಾಡ ಪೇಢಾ ಹಾಗೂ ಬಗೆಬಗೆಯ ತಿನಿಸು ದೊರೆಯಲಿವೆ. ಗ್ರಾಹಕರು ಸಹಕಾರ ನೀಡಬೇಕು ಎಂದು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಮಹಾಂತೇಶ ನಾಗರಹಳ್ಳಿ, ಸೋಮಶೇಖರ ಆಲೂರ, ಮುತ್ತು ಗುಜಮಾಗಡಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net