ವಿರಾಜಪೇಟೆಯಲ್ಲಿ ಬೃಹತ್ ಮೀಲಾದ್ ಸಂದೇಶ ಜಾಥಾ

Oplus_131072
ವಿರಾಜಪೇಟೆಯ ಮುಖ್ಯ ಬೀದಿಗಳಲ್ಲಿ ಬೃಹತ್ ಮೀಲಾದ್ ಸಂದೇಶ ಜಾಥಾ ನಡೆಯಿತು.
Published on

ವಿರಾಜಪೇಟೆ : ವಿರಾಜಪೇಟೆ ಅನ್ವಾರುಲ್ ಹುದಾ ಹಾಗೂ ಸುನ್ನಿ ಸಂಘ ಕುಟುಂಬಗಳ ಸಂಯುಕ್ತಾಶ್ರಯದಲ್ಲಿ ವಿರಾಜಪೇಟೆಯಲ್ಲಿ ಬೃಹತ್ ಮೀಲಾದ್ ಸಂದೇಶ ಜಾಥಾ ಶುಕ್ರವಾರ ನಡೆಯಿತು.

ವಿರಾಜಪೇಟೆ ಪಂಜರ್‌ಪೇಟೆಯಿಂದ ಆರಂಭಗೊಂಡ ಜಾಥಾಗೆ ಕೂರ್ಗ್ ಜಮೀಯತುಲ್ ಉಲಮಾ ಅಧ್ಯಕ್ಷ ಸಯ್ಯದ್ ಶಿಯಾಬುದ್ದೀನ್ ತಂಙಳ್ ಕಿಲ್ಲೂರ್ ಪೂಜೆ ನೆರವೇರಿಸುವುದರ ಮೂಲಕ ಚಾಲನೆ ನೀಡಿದರು.

ನಂತರ ಜಾಥಾ ವಿರಾಜಪೇಟೆ ಪಟ್ಟಣದ ಪ್ರಮುಖ ಬೀದಿಗಳಾದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ದೊಡ್ಡಟ್ಟಿ ಚೌಕಿ, ಗಡಿಯಾರ ಕಂಬ, ಖಾಸಗಿ ಬಸ್ ನಿಲ್ದಾಣ ಹಾಗೂ ಮೀನುಪೇಟೆ ಮೂಲಕ ಸಂಚರಿಸಿ ಅನ್ವಾರ್ ಕ್ಯಾಂಪಸ್‌ನಲ್ಲಿ ಕೊನೆಗೊಂಡಿತು. ಜಾಥಾದಲ್ಲಿ ವಿದ್ಯಾರ್ಥಿಗಳ, ಯುವಕರ, ಹಿರಿಯರ ದಫ್ ಪ್ರದರ್ಶನ, ಫ್ಲವರ್ ಶೋ, ವಿವಿಧ ಜಮಾಅತ್‌ಗಳಿಂದ ಆಗಮಿಸಿ ಆಕರ್ಷಣೆಯ ದಫ್ ಪ್ರದರ್ಶನ ನೋಡುಗರ ಗಮನ ಸೆಳೆಯಿತು.

ಕೂರ್ಗ್ ಜಮಿಯತ್ತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಹಾಗೂ ಅನ್ವಾರ್ ಸಾರಥಿ ಅಶ್ರಫ್ ಅಹ್ಸನಿ ಮಾತನಾಡಿ, ಪ್ರವಾದಿ ಮೊಹಮ್ಮದ್ ಪೈಗಂಬರ್ ವಿಶ್ವಕ್ಕೆ ಒಳ್ಳೆಯ ಸಂದೇಶ ನೀಡಿದ್ದು, ಪರಸ್ಪರ ಸ್ನೇಹ, ಸೌಹಾರ್ದ, ಶಾಂತಿಯ ಸಂದೇಶವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಮೊಹಮ್ಮದ್ ಶರೀಫ್ ಅನ್ವಾರಿ ಮಾತನಾಡಿದರು. ವಾಗ್ಮಿ ಜಬ್ಬಾರ್ ಸಖಾಫಿ ಪಾತೂರ್ ಹುಬ್ಬುರಸೂಲ್, ಜಮೀಯತುಲ್ ಉಲಮಾ ಕೋಶಾಧಿಕಾರಿ ಹುಸೈನ್ ಸಖಾಫಿ ಎಮ್ಮೆಮಾಡು, ಅಬ್ದುಲ್ ಅಝೀಝ್ ತಂಙಳ್, ಅನ್ವರ್ ಉಪಾಧ್ಯಕ್ಷ ಅಬೂಬಕ್ಕರ್ ಹಾಜಿ, ಕುಂಜಿಲ ಮುದರಿಸ್ ನಿಝಾರ್ ಅಹ್ಸನಿ, ಕೆಎಂಜೆ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಕುಂಜಿಲ, ಎಸ್‌ವೈಎಸ್ ಜಿಲ್ಲಾಧ್ಯಕ್ಷ ಹಮೀದ್ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿ ಅಹ್ಮದ್ ಮದನಿ, ಎಸ್‌ಎಸ್‌ಎಫ್ ಜಿಲ್ಲಾಧ್ಯಕ್ಷ ಝುಬೈರ್ ಸಅದಿ, ಪ್ರಧಾನ ಕಾರ್ಯದರ್ಶಿ ಜುನೈದ್ ಅಮ್ಮತ್ತಿ ಇಸ್ಮಾಯಿಲ್ ಸಖಾಫಿ, ಖಾತಿಮ್ ತಂಙಳ್, ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net