ಗೀತಾಗೆ ದೊಡ್ಡ ಅಂತರದ ಗೆಲುವು: ಮಧು ಬಂಗಾರಪ್ಪ

minister madhu bangarappa
ಸಚಿವ ಮಧು ಬಂಗಾರಪ್ಪ
Published on

ಶಿವಮೊಗ್ಗ: ಗ್ಯಾರಂಟಿ ಮೂಲಕ ಕಷ್ಟದಲ್ಲಿರುವವರಿಗೆ ಸರ್ಕಾರ ಸಹಾಯ ಮಾಡಿದ್ದು, ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಸರ್ಕಾರದ ಋಣ ತೀರಿಸಿರುವ ವಿಶ್ವಾಸವಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ದೊಡ್ಡಮಟ್ಟದಲ್ಲಿ ಗೀತಾ ಶಿವರಾಜ್‌ಕುಮಾರ್ ಗೆಲ್ಲುತ್ತಾರೆ. ಛಲದಿಂದ ಅವರು ಚುನಾವಣೆಯನ್ನು ಎದುರಿಸಿದ್ದಾರೆ. ಹಾಗಾಗಿ ನಾನು ಇಷ್ಟೇ ಮತಗಳ ಅಂತರದಿಂದ ಗೆಲ್ಲುತ್ತಾರೆಂದು ನಂಬರ್ ಹೇಳುವುದಿಲ್ಲ. ಭವಿಷ್ಯ ಹೇಳಲು ನಾನು ಜ್ಯೋತಿಷಿಯಲ್ಲ. ಆದರೂ ಹೆಚ್ಚು ಮತದಾರರ ಒಲವು ಗೀತಾ ಪರ ಇದ್ದು, ದೊಡ್ಡ ಅಂತರದಲ್ಲಿ ಗೆಲ್ಲುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ನಟ ಶಿವರಾಜ್‌ಕುಮಾರ್ ಅವರಿಗೆ ಸಣ್ಣ ಪ್ರಮಾಣದ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ತೆರಳಿದ್ದಾರೆ. ಹಾಗಾಗಿ ಗೀತಾ ಕೂಡ ಜತೆಗೆ ತೆರಳಿದ್ದು ನಾಲ್ಕೈದು ದಿನಗಳ ನಂತರ ಶಿವಮೊಗ್ಗಕ್ಕೆ ಆಗಮಿಸುವರು. ಉಳಿದಂತೆ ಗೀತಾ ಪರ ಎಲ್ಲ ಕಾರ್ಯಕರ್ತರು, ಮತದಾರರು ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net