ಮಹಾಲಕ್ಷ್ಮೀ ಲೇಔಟ್ ನ ‘ನಂದಿನಿ ಉತ್ಸವ’ಕ್ಕೆ ಜನಸಾಗರ

nandinilayout
Published on

ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ನಂದಿನಿ ಲೇಔಟ್‌ನ ನವರಾತ್ರಿ ವೃತ್ತದಲ್ಲಿ ದಸರಾ ಪ್ರಯುಕ್ತ 9 ದಿನಗಳ ನಂದಿನಿ ಉತ್ಸವ ಹಾಗೂ ನವರಾತ್ರಿ ಉತ್ಸವಕ್ಕೆ ಜನಸಾಗರವೇ ಹರಿದುಬರುತ್ತಿದೆ. ಉತ್ಸವದ 5ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಎಂದಿನಂತೆ ದೊಡ್ಡ ಸಂಖ್ಯೆಯಲ್ಲಿ ಸೇರಿ ಕಲಾವಿದರು ನೀಡಿದ ಪ್ರದರ್ಶನವನ್ನು ಕಣ್ತುಂಬಿಕೊಂಡರು.

ಈ ಕಾರ್ಯಕ್ರಮಕ್ಕೆ ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎನ್.ಜಯರಾಂ ಹಾಗೂ ಎ್ಕೆಸಿಸಿಐ ನಿಕಟಪೂರ್ವ ಅಧ್ಯಕ್ಷ ಡಾ. ಸಿ.ಐ.ಎಸ್ ಪ್ರಸಾದ್ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಪ್ರಸಾದ್, ಇಲ್ಲಿಯ ನಂದಿನಿ ಉತ್ಸವ ಸಡಗರ ನೋಡಿದ್ರೆ ಮೈಸೂರು ದಸರಾ ನೋಡಲು ಹೋಗಬೇಕಿಲ್ಲ. ಏಕೆಂದರೆ ಮೈಸೂರು ದಸರಾ ವೈಭವ ಸಾರುವ ನಿಟ್ಟಿನಲ್ಲಿ ಈ ಬಡಾವಣೆಯಲ್ಲಿ ಕಳೆದ ಹಲವು ವರ್ಷಗಳಿಂದ ಬಿಬಿಎಂಪಿ ಮಾಜಿ ಸದಸ್ಯ ಕೆ.ವಿ.ರಾಜೇಂದ್ರ ಕುಮಾರ್ ನಡೆಸಿಕೊಂಡು ಬರುತ್ತಿದ್ದಾರೆ. ನಮ್ಮ ವಾಸವಿ ಟ್ರಸ್ಟ್ ವತಿಯಿಂದ ಹಲವಾರು ಜನಪರ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಟ್ರಸ್ಟ್ ಮೂಲಕ ಆರೋಗ್ಯ, ಶಿಕ್ಷಣ ಸೇರಿದಂತೆ ಇತರ ಕ್ಷೇತ್ರದ ಅಶಕ್ತರಿಗೆ ಸಹಾಯ ನೀಡಲಾಗುವುದು ಎಂದರು.

ಬಾಕಿ ಕೆಲಸಗಳ ಪೂರ್ಣಕ್ಕೆ ಆದ್ಯತೆ:

ಎನ್.ಜಯರಾಮ್ ಮಾತನಾಡಿ, ಒಂಬತ್ತು ದಿನಗಳ ಅದ್ದೂರಿ ಸಮಾರಂಭದಲ್ಲಿ ಈಗಾಗಲೇ ಹಲವು ಕಾರ್ಯಕ್ರಮಗಳು ನಡೆದು ಜನರು ಖುಷಿಪಟ್ಟಿದ್ದಾರೆ. ಈ ವಾರ್ಡ್ ವಿಶೇಷತೆ ಎಂದರೆ ಸ್ಮಾರ್ಟ್ ವಾರ್ಡ್ ಎಂದು ಹೆಸರು ಮಾಡಿದೆ. ಶಾಸಕ ಕೆ.ಗೋಪಾಲಯ್ಯ ಹಾಗೂ ರಾಜೇಂದ್ರಕುಮಾರ್ ಸೇರಿದಂತೆ ಕ್ಷೇತ್ರದ ಎಲ್ಲ ಮುಖಂಡರು ಕೈ ಜೋಡಿಸಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಮುಂದೆಯೂ ಬಾಕಿಯಿರುವ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲಾಗುವುದು. ಎಲ್ಲರಿಗೂ ತಾಯಿ ಚಾಮುಂಡೇಶ್ವರಿ ಒಳ್ಳೆಯ ಆರೋಗ್ಯ, ಆಯಸ್ಸು ಕೊಟ್ಟು ಕಾಪಾಡಲಿ ಎಂದು ಶುಭ ಕೋರಿದರು.

ಇದೇ ಸಂದರ್ಭದಲ್ಲಿ ನಂದಿನಿ ಉತ್ಸವ ಸಮಿತಿ ವತಿಯಿಂದ ಎ್ಕೆಸಿಸಿಐ ಅಧ್ಯಕ್ಷ ಪ್ರೆಸಿಡೆಂಟ್ ಪ್ರಸಾದ್, ಜಯರಾಂ ಸೇರಿದಂತೆ ಇತರರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net