

ಹುಬ್ಬಳ್ಳಿ: ಪುಣೆಯ ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದವರು ಫೆಬ್ರವರಿ 4ರಂದು ಹುಬ್ಬಳ್ಳಿಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ಕೈಗೊಳ್ಳಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಲಿಂದ ಸುಮಾರು 15 ಸಾವಿರ ಜನ ಆಗಮಿಸಲಿದ್ದು ಅಂದು ಬೆಳಗ್ಗೆ 7ರಿಂದ 10 ಗಂಟೆಯವರೆಗೆ ಸ್ವಚ್ಛತೆ ಕೆಲಸ ನಡೆಸುವರು. ಪ್ರತಿಷ್ಠಾನದವರು ಸ್ವಯಂಪ್ರೇರಣೆಯಿಂದ ಈ ಕೆಲಸ ಮಾಡುತ್ತ ಬಂದಿದ್ದಾರೆ. ಅವರು ಸ್ವತಃ ಖರ್ಚಿನಲ್ಲಿ ಇಲ್ಲಿಗೆ ಬರುತ್ತಿದ್ದಾರೆ ಎಂದರು.
3 ಗಂಟೆಗಳಲ್ಲಿ ಸುಮಾರು 2,500 ಟನ್ ಕಸ ಸಂಗ್ರಹವಾಗಬಹುದು ಎಂದು ಅವರು ಅಂದಾಜಿಸಿದ್ದಾರೆ. ಪಾಲಿಕೆಯಿಂದ ಟ್ರ್ಯಾಕ್ಟರ್, ಆಟೋ ಟಿಪ್ಪರ್, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಗಿದೆ. ಮುಂಚಿತವಾಗಿ ಈ ಕುರಿತು ಪ್ರಚಾರ ನಡೆಸುವಂತೆ ಪಾಲಿಕೆ ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಹೇಳಿದರು.
BIG CLEANLINESS DRIVE, IN HUBBALLI, ON FEB 4,