ಮಹಿಳಾ ಸಂಘಕ್ಕೆ ಮಣಿಬಾಯಿ ಪುರಸ್ಕಾರ

IMG-20250828-WA0012-1.jpg
Published on

ಹುಬ್ಬಳ್ಳಿ: ಮಹಾರಾಷ್ಟ್ರದ ಪೂನಾ ಉರಳಿಕಾಂಚನದಲ್ಲಿ ಏರ್ಪಡಿಸಿದ್ದ ಧಾರವಾಡದ ಬೈಪ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ 59ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಕಲಘಟಗಿ ತಾಲೂಕಿನ ಸೂರಶೆಟ್ಟಿಕೊಪ್ಪದ ಶ್ರೀವೈಭವ ಲಕ್ಷ್ಮೀ ಮಹಿಳಾ ಸ್ವಸಹಾಯ ಸಂಘಕ್ಕೆ ಡಾ. ಮಣಿಬಾಯಿ ಪುರಸ್ಕಾರ ನೀಡಿ ಗೌರವಿಸಲಾಯಿತು.

ದೇಶದ 17 ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೈಪ್ ಸಂಸ್ಥೆಯ ಈ ಕಾರ್ಯಕ್ರಮದಲ್ಲಿ ಎಲ್ಲ ರಾಜ್ಯಗಳ ಮಹಿಳಾ ಸ್ವಸಹಾಯ ಸಂಘಗಳು ಭಾಗವಹಿಸಿದ್ದವು.

ಈ ಪೈಕಿ ಧಾರವಾಡ ಜಿಲ್ಲೆಯ ಸೂರಶೆಟ್ಟಿಕೊಪ್ಪದ ಸ್ವಸಹಾಯ ಸಂಘ ಆಯ್ಕೆಯಾಗಿದ್ದು, ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net