ಗುರು ಬದುಕಿನ ಭವಿಷ್ಯ ರೂಪಿಸಿದ ಶಿಲ್ಪಿ

ಹಳ್ಳಿಖೇಡ(ಬಿ) ಪಟ್ಟಣದ ಬಿಎಸ್​ಎಸ್ಕೆ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನೆ  ಕಾರ್ಯಕ್ರಮದಲ್ಲಿ ಡಾ.ವಿಜಯಕುಮಾರ ಕೋಟೆ, ಗೌರೀಶ ಅಕ್ಕಿ, ಸುಭಾಷ ಗಂಗಾ, ವಿನೋದ ಕೋಟೆ, ವೈಜನಾಥ ಕಟ್ಟಿಮನಿ, ಅನಿಲ ಕುಡ್ತೆ ಇತರರಿದ್ದರು.
ಹಳ್ಳಿಖೇಡ(ಬಿ) ಪಟ್ಟಣದ ಬಿಎಸ್​ಎಸ್ಕೆ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಡಾ.ವಿಜಯಕುಮಾರ ಕೋಟೆ, ಗೌರೀಶ ಅಕ್ಕಿ, ಸುಭಾಷ ಗಂಗಾ, ವಿನೋದ ಕೋಟೆ, ವೈಜನಾಥ ಕಟ್ಟಿಮನಿ, ಅನಿಲ ಕುಡ್ತೆ ಇತರರಿದ್ದರು.
Published on: 

ಹುಮನಾಬಾದ್​: ಗುರುಗಳು ನಮಗೆ ವಿದ್ಯೆಯ ಜತೆಗೆ ಸಂಸ್ಕಾರ ನೀಡಿ ಬದುಕಿನ ಭವಿಷ್ಯವನ್ನು ರೂಪಿಸಿದ ಶಿಲ್ಪಿಗಳಾಗಿದ್ದಾರೆ. ನಾವು ಇಂದು ಜೀವನದಲ್ಲಿ ಈ ಮಟ್ಟಕ್ಕೆ ಬೆಳೆಯಲು ಶಾಲೆಯಲ್ಲಿ ಶಿಕ್ಷಣ ನೀಡಿದ ಗುರುಗಳೇ ಕಾರಣ ಎಂದು ಹಿರಿಯ ಪತ್ರಕರ್ತ, ನಿರೂಪಕ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿ ಗೌರೀಶ ಅಕ್ಕಿ ಹೇಳಿದರು.

ತಾಲೂಕಿನ ಹಳ್ಳಿಖೇಡ(ಬಿ)ದ ಬಿಎಸ್​ಎಸ್ಕೆ ಶಾಲೆಯ ಹಳೆಯ ವಿದ್ಯಾರ್ಥಿಗಳ ವತಿಯಿಂದ ಭಾನುವಾರ ಆಯೋಜಿಸಿದ್ದ ಗುರುವಂದನೆ ಹಾಗೂ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಲ್ಯದಲ್ಲಿ ಗುರುಗಳು ಕಲಿಸಿದ ವಿದ್ಯೆ, ಸಂಸ್ಕಾರ ಮತ್ತು ಜೀವನಮೌಲ್ಯಗಳು ನಮ್ಮ ಭವಿಫ್ಯಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ಹೇಳಿದರು.

ಚರ್ಮರೋಗ ತಜ್ಞ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿ ಡಾ. ವಿಜಯಕುಮಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಿವೃತ್ತ ಶಿಕ್ಷಕಿಯರಾದ ಹಾಲಮ್ಮ, ಸುಕನ್ಯಾ, ಸುಶೀಲಾಬಾಯಿ, ಲಕ್ಷಿ$್ಮಬಾಯಿ ಇಜಾರೆ, ಶಿಕ್ಷಕರಾದ ಮಹದೇವಪ್ಪ ಇಜಾರೆವ, ಇಬ್ರಾಹಿಂ ಅವರನ್ನು ಹಳೆಯ ವಿದ್ಯಾರ್ಥಿಗಳು ಸನ್ಮಾನಿಸಿ ಗೌರವಿಸಿದರು.

ಹಳೆಯ ವಿದ್ಯಾರ್ಥಿಗಳಾದ ಸರಕಾರಿ ಪ್ರೌಢ ಶಾಲೆ ಶಿಕ್ಷಕರ ಸಂಘದ ರಾಜ್ಯ ಪರಿಷತ್​ ಸದಸ್ಯ ಸುಭಾಷ ಗಂಗಾ, ವಿನೋದ ಕೋಟೆ, ವೈಜನಾಥ ಕಟ್ಟಿಮನಿ, ಅನಿಲ ಕುಡ್ತೆ ಸೇರಿ ಹಲವರು ತಮ್ಮ ಬಾಲ್ಯದ ಸವಿ ನೆನಪುಗಳನ್ನು ಹಂಚಿಕೊಂಡರು. ಕುಟುಂಬ ಮಿಲನದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಕುಟುಂಬದ ಸದಸ್ಯರಿಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಶಿವಗಂಗಾ ಶಾಲೆಯ ಮಕ್ಕಳಿಂದ ಸಾಂಸತಿಕ ನೃತ್ಯರೂಪಕ ಪ್ರದರ್ಶನ ನಡೆಯಿತು.

ಸ್ಥಳಿಯ ಶಿವಗಂಗಾ ಶಾಲೆಯ ಅಧ್ಯಕ್ಷೆ ಮಂಜುಳಾ ಗಂಗಾ, ಹಳೆಯ ವಿದ್ಯಾರ್ಥಿಗಳಾದ ವಿರೇಶ ಪಾಟೀಲ, ಸುನೀಲ ಸೊಂಜಿ, ಓಂಕಾರ ಪಾಟೀಲ, ರಾಜೇಶ ಬಸನಾಳೆ, ಅರುಣ ಬೊಮ್ಮಶೆಟ್ಟಿ, ಭದ್ರೇಶ, ಸವಿತಾ, ವಿಜಯಲಕ್ಷ್ಮೀ ಬಂಡೆಪ್ಪ ಕೋಟೆ, ಸಂಗಪ್ಪ ಹಿಪ್ಪಳಗಾಂವ, ರಾಜು ಪಾಟೀಲ, ಝರ್ನು ಕಾವಳೆ ಇತರರಿದ್ದರು. ತ್ರಿವೇಣಿ ಹೊನ್ನ ಸ್ವಾಗತಿಸಿದರು. ಓಂಕಾರ ಉಪ್ಪೆ ವಂದಿಸಿದರು. ಜ್ಯೋತಿ ತೆಗನೂರ್​ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net