ಬೇಲೂರಿನಲ್ಲಿ ಅಂಬಾರಿ ಮೆರವಣಿಗೆ ವೈಭವ

ಹುಲಸೂರು ತಾಲೂಕಿನ ಬೇಲೂರಿನಲ್ಲಿ ರಾತ್ರಿ ಜೈ ಅಂಬಾ ಭವಾನಿ ಜಾತ್ರೋತ್ಸವ ನಿಮಿತ್ತ ಸೋಮವಾರ  ಅಂಬಾರಿ ಮೆರವಣಿಗೆಗೆ ಶಾಸಕ ಶರಣು ಸಲಗರ ಚಾಲನೆ ನೀಡಿದರು. ಶ್ರೀ ಪ್ರಭುಕುಮಾರ ಶಿವಾಚಾರ್ಯರು, ಸಹಾಯ ಆಯುಕ್ತೆ ಸಾವಿತ್ರಿ ಸಲಗರ, ಸೂರ್ಯಕಾಂತ ಚಿಲ್ಲಾಬಟ್ಟೆ, ರಾಮಲಿಂಗ ಸಾಗಾವೆ, ಬಸವರಾಜ ಗುಂಗೆ ಇತರರಿದ್ದರು.
ಹುಲಸೂರು ತಾಲೂಕಿನ ಬೇಲೂರಿನಲ್ಲಿ ರಾತ್ರಿ ಜೈ ಅಂಬಾ ಭವಾನಿ ಜಾತ್ರೋತ್ಸವ ನಿಮಿತ್ತ ಸೋಮವಾರ ಅಂಬಾರಿ ಮೆರವಣಿಗೆಗೆ ಶಾಸಕ ಶರಣು ಸಲಗರ ಚಾಲನೆ ನೀಡಿದರು. ಶ್ರೀ ಪ್ರಭುಕುಮಾರ ಶಿವಾಚಾರ್ಯರು, ಸಹಾಯ ಆಯುಕ್ತೆ ಸಾವಿತ್ರಿ ಸಲಗರ, ಸೂರ್ಯಕಾಂತ ಚಿಲ್ಲಾಬಟ್ಟೆ, ರಾಮಲಿಂಗ ಸಾಗಾವೆ, ಬಸವರಾಜ ಗುಂಗೆ ಇತರರಿದ್ದರು.
Published on: 

ಹುಲಸೂರು: ಬೇಲೂರಿನಲ್ಲಿ ಜೈ ಭವಾನಿ ದೇವಸ್ಥಾನದ ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ಭವ್ಯ ಮೆರವಣಿಗೆ ಜರುಗಿತು. ದೇವಸ್ಥಾನ ಎದುರು ಅಂಬಾರಿಯಲ್ಲಿ ಆಸೀನಳಾಗಿದ್ದ ಭವಾನಿ ದೇವಿ ಮೂರ್ತಿಗೆ ಪುಷ್ಪಮಾಲೆ ಮುಖಾಂತರ ಶಾಸಕ ಶರಣು ಸಲಗರ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.

ದೇವಸ್ಥಾನದಿಂದ ಹೊರಟ ಮೆರವಣಿಗೆ ಮುಖ್ಯರಸ್ತೆ, ಜೈ ಹನುಮಾನ, ಬಸವೇಶ್ವರ ದೇವಸ್ಥಾನದ ಮುಂಭಾಗದಿಂದ ವಿವಿಧ ಬಡಾವಣೆಗಳ ಮೂಲಕ ಮತ್ತೆ ಜೈ ಭವಾನಿ ದೇವಸ್ಥಾನಕ್ಕೆ ತಲುಪಿತು. ಮರೆವಣಿಗೆಯಲ್ಲಿ ತಾಳ,ಮೇಳ, ವಾದ್ಯ, ಪಲ್ಲಕ್ಕಿ ಮೆರವಣಿಗೆ, ಹೂವು, ತೋರಣ, ಬಾಳೆ ಎಲೆಗಳಿಂದ ಶೃಂಗರಿಸಿದ ವಾಹನದಲ್ಲಿ ದೇವಿ ಮೂರ್ತಿ ಜತೆಗೆ ಮಸ್ಕಿ ತಾಲೂಕಿನ ಬಹುರುಪಿ ಚೌಡಯ್ಯ ಹಗಲ ವೇಷ, ತೆಲಂಗಾಣ ಕಾಚಿಗೂಡಾ ನಗರದ ಪೋತರಾಜ್​ ಕುಣಿತ, ಹುಬ್ಬಳ್ಳಿ-&ಧಾರವಾಡ ಜಿಲ್ಲೆಯ ಜಾನಪದ ಕಲಾ ತಂಡದ ಹಲಗಿ ವಾದನ, ಮಂಡ್ಯ ಜಿಲ್ಲೆ ಪೂಜಾ ಕುಣಿತ , ಉಡುಪಿ ಹುಲಿ ವೇಷ, ಸಾತಾರಾ ಜಿಲ್ಲೆ ಶಿವಕಾಲಿನ ಮರದಿನಿ ಡೋಳು ಕುಣಿತ ನೋಡುಗರ ಗಮನ ಸೆಳೆಯಿತು.

ಗ್ರಾಮದಲ್ಲಿ ದೇವಿ ಪಲ್ಲಕ್ಕಿ ಬರುತ್ತಿದ್ದಂತೆ ರಸ್ತೆ ಉದ್ದಕ್ಕೂ ಮಹಿಳೆಯರು, ಮಕ್ಕಳು ಜೈ ಘೋಷಗಳನ್ನು ಹಾಕುತ್ತಾ ಆರತಿ ಮಾಡಿ, ಕರ್ಪೂರ, ಕಾಯಿ ಒಡೆದು ದರ್ಶನ ಪಡೆದರು. ಕಡಗಂಚಿ ಗುರು ಶಾಂತಲಿಂಗೇಶ್ವರ ಸಂಸ್ಥಾನ ಮಠದ ಮೀನುಕಾ ಹೆಣ್ಣು ಆನೆ ಅಂಬಾರಿ ಹೊತ್ತು ಗಂಭೀರ ಹೆಜ್ಜೆಗಳು ನೋಡುಗರ ಕಣ್ಮನ ಸೆಳೆದರೆ, ಮಾವುತರಿಗೆ ಅರಣ್ಯ ಇಲಾಖೆ ಹಾಗೂ ಪೊಲೀಸ್​ ಸಿಬ್ಬಂದಿ ಸಾಥ್​ ನೀಡಿದರು. ಡಿಜೆ ಭಕ್ತಿ ಗೀತೆಗಳಿಗೆ ಯುವಕರ ಜತೆ ಶಾಸಕ ಶರಣು ಸಲಗರ, ಸೂರ್ಯಕಾಂತ ಚಿಲ್ಲಾಬಟ್ಟೆ, ರಾಮಲಿಂಗ ಸಾಗಾವೆ, ಬಸವರಾಜ ಗುಂಗೆ ಸೇರಿ ಅನೇಕರು ಡಾನ್ಸ್​ ಮಾಡಿದರು.

ಶ್ರೀ ಪ್ರಭುಕುಮಾರ ಶಿವಾಚಾರ್ಯರು, ಸಹಾಯ ಆಯುಕ್ತೆ ಸಾವಿತ್ರಿ ಶರಣು ಸಲಗರ, ಉತ್ಸವ ಸಮಿತಿ ಅಧ್ಯಕ್ಷ ಸೂರ್ಯಕಾಂತ ಚಿಲ್ಲಾಬಟ್ಟೆ, ಜಿಪಂ ಮಾಜಿ ಅಧ್ಯಕ್ಷ ಅನೀಲ ಭುಸಾರೆ, ಪ್ರಮುಖರಾದ ರಾಮಲಿಂಗ ಸಾಗಾವೆ, ಸಂತೋಷ ಶೆಡೋಳೆ, ಬಸವರಾಜ ಗುಂಗೆ, ರವೀಂದ್ರ ಗುಂಗೆ, ರಾಮಣ್ಣ ಹುಲಸೂರೆ, ಅಶೋಕ ವಕಾರೆ, ಪ್ರಕಾಶ ಮೆಂಡೊಳೆ, ಹರಶಾಂತ ಅಳ್ಳೆ, ವೀರಶೆಟ್ಟಿ ಮಲ್ಲಶೆಟ್ಟಿ, ಕಾಮಣ್ಣ ಬಾಗ, ಶಾಲಿವಾನ ಸತಾನೆ, ಬಾಲಾಜಿ ಪಾಟೀಲ್​ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net