ನೀರಿನ ಸಮಸ್ಯೆ ಪರಿಹಾರ ಶಾಸಕರ ಆದ್ಯತೆಯಾಗಲಿ

ಜಾನಸನ್ ಘೋಡೆ ಸಲಹೆ
bidar
ಜಾನಸನ್ ಘೋಡೆ
Published on: 

ಬೀದರ್: ಔರಾದ್ ವಿಧಾನಸಭಾ ಕ್ಷೇತ್ರದಲ್ಲಿ ತೀವ್ರವಾಗಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಪರಿಹಾರವೇ ಶಾಸಕ ಪ್ರಭು ಚವಾಣ್ ಅವರ ಆದ್ಯತೆಯಾಗಬೇಕು ಎಂದು ಕಾಂಗ್ರೆಸ್ ಕಿಸಾನ್ ವಿಭಾಗದ ರಾಷ್ಟ್ರೀಯ ಜಂಟಿ ಸಂಯೋಜಕ ಜಾನಸನ್ ಘೋಡೆ ಸಲಹೆ ನೀಡಿದ್ದಾರೆ.
ಜನ ಜಲ ಕ್ಷಾಮ ಎದುರಿಸುತ್ತಿರುವಾಗ ಶಾಸಕರು ಸನ್ಮಾನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.
ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಶಾಸಕರು ಗಂಭೀರವಾದಂತೆ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವ ವರೆಗೆ ಶಾಸಕರು ಕ್ಷೇತ್ರದಲ್ಲೇ ಠಿಕಾಣಿ ಹೂಡಬೇಕು. ಔರಾದ್ ಪಟ್ಟಣ ಹಾಗೂ ಕ್ಷೇತ್ರದ ಜನರ ನೀರಿನ ಬವಣೆಗೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.