ಶರಣ ವಿಜಯೋತ್ಸವ ನಾಡಹಬ್ಬ 11ರಿಂದ

ಬಸವಕಲ್ಯಾಣದ ಹರಳಯ್ಯನವರ ಗವಿಯಲ್ಲಿ ನಡೆಯಲಿರುವ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆಯ ಕರಪತ್ರವನ್ನು ಪೂಜ್ಯ ಡಾ.ಗಂಗಾಬಿಕಾ ಅಕ್ಕ ಬಿಡುಗಡೆ ಮಾಡಿದರು. ಪ್ರಮುಖರಾದ ವೀರಣ್ಣ ಹಲಶೆಟ್ಟಿ, ಡಾ.ಜಿ.ಎಸ್​.ಭುರಳೆ, ಬಸವರಾಜ ಬಾಲಿಕಿಲೆ, ಚನ್ನಪ್ಪ ಪ್ರರ್ತಾಪುರೆ, ಶಂಕರ ಕರಣೆ, ನಿರ್ಮಲಾ ಶಿವಣಕರ್​, ಮಲ್ಲಪ್ಪ ಭಾಗ್ಯವಾಡಿ, ರವೀಂದ್ರ ಕೊಳಕೂರ, ಶಿವಕುಮಾರ ಬಿರಾದಾರ  ಇತರರಿದ್ದರು.
ಬಸವಕಲ್ಯಾಣದ ಹರಳಯ್ಯನವರ ಗವಿಯಲ್ಲಿ ನಡೆಯಲಿರುವ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆಯ ಕರಪತ್ರವನ್ನು ಪೂಜ್ಯ ಡಾ.ಗಂಗಾಬಿಕಾ ಅಕ್ಕ ಬಿಡುಗಡೆ ಮಾಡಿದರು. ಪ್ರಮುಖರಾದ ವೀರಣ್ಣ ಹಲಶೆಟ್ಟಿ, ಡಾ.ಜಿ.ಎಸ್​.ಭುರಳೆ, ಬಸವರಾಜ ಬಾಲಿಕಿಲೆ, ಚನ್ನಪ್ಪ ಪ್ರರ್ತಾಪುರೆ, ಶಂಕರ ಕರಣೆ, ನಿರ್ಮಲಾ ಶಿವಣಕರ್​, ಮಲ್ಲಪ್ಪ ಭಾಗ್ಯವಾಡಿ, ರವೀಂದ್ರ ಕೊಳಕೂರ, ಶಿವಕುಮಾರ ಬಿರಾದಾರ ಇತರರಿದ್ದರು.
Published on: 

ಬಸವಕಲ್ಯಾಣ: ನಗರದ ಹರಳಯ್ಯನವರ ಗವಿಯಲ್ಲಿ ಅ.11ರಿಂದ 21ರವರೆಗೆ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಹೇಳಿದರು.

ನಗರದ ಹರಳಯ್ಯನವರ ಗವಿಯಲ್ಲಿ ಶನಿವಾರ ಕರಪತ್ರ ಬಿಡುಗಡೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು. 11ರಂದು ಬೆಳಗ್ಗೆ 8ಕ್ಕೆ ಆರಂಭೋತ್ಸವ, ಸಂಜೆ 6ಕ್ಕೆ ಉದ್ಘಾಟನೆ ನೆರವೇರುವುದು. 12ರಂದು ಸಂಜೆ ಮಾಜಿ ಸೈನಿಕರ ಸಮಾವೇಶ, 13ರಂದು ಮಹಾ ಶಕ್ತಿಕೂಟಗಳ ಸಮಾವೇಶ, 14ರಂದು ಸಂಜೆ ಅನುಭವ ಮಂಟಪದ 3ನೇ ಪೀಠಾಧಿಪತಿ ಶಿವಯೋಗಿ ಸಿದ್ಧರಾಮ ನಾಟಕ ಪ್ರದರ್ಶನ ನಡೆಯಲಿದೆ ಎಂದರು.

15ರಂದು ರೈತ ಸಮಾವೇಶ, 16ರಂದು ಹಿರಿಯ ನಾಗರಿಕರ ಸಮಾವೇಶ, 17ರಂದು ಜಗತ್ತಿನ ಮೊದಲ ಸ್ತ್ರೀ ತತ್ವಜ್ಞಾನಿ ಮಹಾದೇವಿಯಕ್ಕ ಕುರಿತು ಗೋಷ್ಠಿ, 18ರಂದು ಬಸವಕಲ್ಯಾಣದ ಪುನರುಜ್ಜೀವನದ ರೂವಾರಿ ಬಾಬಾಸಾಹೇಬ ವಾರದ ಕುರಿತು ಗೋಷ್ಠಿ, 19ರಂದು ಮಹಾರಾಷ್ಟದ ಬಸವ ಬೆಳಕು. 20ರಂದು 11ಕ್ಕೆ ಹುತಾತ್ಮ ಶರಣ ಹರಳಯ್ಯ- ಕಲ್ಯಾಣಮ್ಮನವರ ವೀರಗಾಥೆ, ಮಧ್ಯಾಹ್ನ 3ಕ್ಕೆ ಐತಿಹಾಸಿಕ ಬಸವಕಲ್ಯಾಣದ ಕೋಟೆಯಿಂದ ಶರಣರ ಭಾವಚಿತ್ರಗಳ ಮೆರವಣಿಗೆ. ಸಂಜೆ 6ಕ್ಕೆ ಶರಣ ವಿಜಯ ರಾಷ್ಟ್ರೀಯ ಪ್ರಶಸ್ತಿ ಪ್ರದಾನ, 21ರಂದು ವಚನ ಪಠಣದೊಂದಿಗೆ ಮಂಗಲ ಜರುಗುವುದು. ಪ್ರತಿದಿನ ಬೆಳಗ್ಗೆ 8ರಿಂದ ಸಾಮೂಹಿಕ ಇಷ್ಟಲಿಂಗ ಪೂಜೆ ಮತ್ತು ಸಿದ್ಧರಾಮೇಶ್ವರರ ಪ್ರವಚನ ನಡೆಯುವುದು ಎಂದು ಮಾಹಿತಿ ನೀಡಿದರು.

ಯುವ ಸಮಾವೇಶ ಮತ್ತು ಸಂವಾದ 14ರಂದು ಬೆಳಗ್ಗೆ 11ಕ್ಕೆ ನಡೆಯಲಿದ್ದು, ಇಸ್ರೋದ ಮಾಜಿ ಸಹ ಸಂಚಾಲಕ ಡಾ. ರಾಮನಗೌಡ ವಿ.ನಾಡಗೌಡ ಹಾಗೂ ಡಿಆರ್​ಡಿಒ ವಿಜ್ಞಾನಿ ಡಾ.ಕೆ.ತೇಜಸ್ವಿ ಅವರಿಂದ ವ್ಯಾಖ್ಯಾನ ಮತ್ತು ಸಂವಾದ ಜರುಗಲಿದೆ ಎಂದು ಹೇಳಿದರು.

ಪ್ರಮುಖರಾದ ವೀರಣ್ಣ ಹಲಶೆಟ್ಟಿ, ಡಾ.ಜಿ.ಎಸ್​.ಭುರಳೆ, ಬಸವರಾಜ ಬಾಲಿಕಿಲೆ, ಚನ್ನಪ್ಪ ಪ್ರರ್ತಾಪುರೆ, ಶಂಕರ ಕರಣೆ, ನಿರ್ಮಲಾ ಶಿವಣಕರ್​, ಮಲ್ಲಪ್ಪ ಭಾಗ್ಯವಾಡಿ, ರವೀಂದ್ರ ಕೊಳಕೂರ, ಶಿವಕುಮಾರ ಬಿರಾದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net