ಮಕ್ಕಳನ್ನು ಭವಿಷದ ಪ್ರಜೆಯನ್ನಾಗಿ ಮಾಡಿ

ಔರಾದ್​ ತಾಲೂಕಿನ ಸಂತಪುರ ಸರಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಸುರಕ್ಷಿತ ಬಾಲ್ಯ ಅಭಿಯಾನ ಕಾರ್ಯಕ್ರಮವನ್ನು ಹಿರಿಯ ಸಿವಿಲ್​ ನ್ಯಾಯಾಧೀಶ ಹಾಜಿ ಹುಸೇನ್​ಸಾಬ್​ ಯಾದವಾಡ  ಉದ್ಘಾಟಿಸಿದರು. ಬಾಲಾಜಿ, ಪ್ರಕಾಶ ರಾಠೋಡ್​, ದಿನೇಶ ಎಂ.ಟಿ., ಜ್ಯೋತಿ ಜಿರ್ಗೆ,  ಅಜಯಕುಮಾರ ದುಬೆ ಇತರರಿದ್ದರು.
ಔರಾದ್​ ತಾಲೂಕಿನ ಸಂತಪುರ ಸರಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಸುರಕ್ಷಿತ ಬಾಲ್ಯ ಅಭಿಯಾನ ಕಾರ್ಯಕ್ರಮವನ್ನು ಹಿರಿಯ ಸಿವಿಲ್​ ನ್ಯಾಯಾಧೀಶ ಹಾಜಿ ಹುಸೇನ್​ಸಾಬ್​ ಯಾದವಾಡ ಉದ್ಘಾಟಿಸಿದರು. ಬಾಲಾಜಿ, ಪ್ರಕಾಶ ರಾಠೋಡ್​, ದಿನೇಶ ಎಂ.ಟಿ., ಜ್ಯೋತಿ ಜಿರ್ಗೆ, ಅಜಯಕುಮಾರ ದುಬೆ ಇತರರಿದ್ದರು.
Published on: 

ಔರಾದ್​: ಮಕ್ಕಳು ಸಮಾಜದ ಆಸ್ತಿ, ಭಾರತದ ಭವಿಷ್ಯ. ಹೀಗಾಗಿ ಅವರ ಹಕ್ಕುಗಳನ್ನು ರಕ್ಷಿಸುವ ಮೂಲಕ ಅವರಿಗೆ ಸುರಕ್ಷಿತ ವಾತಾವರಣ ಕಲ್ಪಿಸಿ ಕೊಡುವುದು ಅವಶ್ಯಕ ಎಂದು ಹಿರಿಯ ಸಿವಿಲ್​ ನ್ಯಾಯಾಧೀಶ ಹಾಜಿ ಹುಸೇನ್​ ಸಾಬ್​ ಯಾದವಾಡ ಹೇಳಿದರು.

ತಾಲೂಕಿನ ಸಂತಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್​ ಇಲಾಖೆ, ತಾಲೂಕ ವಕೀಲರ ಸಂಘದ ಸಹಯೋಗದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮದಡಿ ಬುಧವಾರ ಆಯೋಜಿಸಿದ್ದ ಸುರಕ್ಷಿತ ಬಾಲ್ಯ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಬಾಲ ಕಾರ್ಮಿಕ ಪದ್ಧತಿ ನಿಮೂರ್ಲನೆ, ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಅಪರಾಧಗಳ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಅಭಿಯಾನವನ್ನು ಶಾಲೆಗಳಲ್ಲಿ ನಡೆಸಲಾಗುತ್ತಿದೆ. ಮಕ್ಕಳು ಶಾಲೆಗೆ ಯಾರ ಒತ್ತಡದಿಂದ ಬರದೆ, ಪ್ರೀತಿಯಿಂದ ಬರಬೇಕು. ಶಿಕ್ಷಣ ಪಡೆಯುವಾಗ ಯಾವಯದೇ ಆತಂಕವಿರದೆ ಕುತೂಹಲ ಇರಬೇಕು. ಮಕ್ಕಳಿಗೆ ಪಾಲಕರು ಉತ್ತಮ ಶಿಕ್ಷಣ ಕೊಡಿಸಿ, ಭವಿಷದ ಪ್ರಜೆಯನ್ನಾಗಿ ಮಾಡಲು ಮುಂದಾಗಬೇಕು ಎಂದು ಹೇಳಿದರು.

ಮಕ್ಕಳು ಯಾವುದೇ ರೀತಿಯ ಆಪತ್ತು ಅಥವಾ ಕಿರುಕುಳ ಎದುರಿಸಿದಾಗ ತಕ್ಷಣವೇ ಮಕ್ಕಳ ಸಹಾಯವಾಣಿ 1098 ಅಥವಾ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ ನೆರವು ಪಡೆಯಬೇಕು ಎಂದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ಬಾಲಾಜಿ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ರಾಠೋಡ್​, ಪಿಎಸ್​ಐ ದಿನೇಶ ಎಂ.ಟಿ., ಸಮೂಹ ಸಂಪನ್ಮೂಲ ವ್ಯಕ್ತಿ ಜ್ಯೋತಿ ಜಿರ್ಗೆ, ಮುಖ್ಯಗುರು ಅಜಯಕುಮಾರ ದುಬೆ ಇತರರಿದ್ದರು. ಶಿಕ್ಷಕ ಶಿವಲಿಂಗ ಹೇಡೆ ಸ್ವಾಗತಿಸಿ ನಿರೂಪಣೆ ಮಾಡಿದರು.