

ಬೀದರ್: ಸಾಹಿತಿ ಡಾ. ಬಸವರಾಜ ಬಲ್ಲೂರ ಸರ್ವಾಧ್ಯಕ್ಷತೆಯಲ್ಲಿ ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ನ. 21 ಹಾಗೂ 22 ರಂದು ನಡೆಯಲಿರುವ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆಗಳು ನಡೆದಿವೆ.
ಸಮ್ಮೇಳವನ್ನು ಸರ್ವ ರೀತಿಯಿಂದಲೂ ಯಶಸ್ವಿಗೊಳಿಸಲು ಸ್ವಾಗತ, ಮೆರವಣಿಗೆ, ಪ್ರಚಾರ, ಸ್ಮರಣ ಸಂಚಿಕೆ, ವೇದಿಕೆ, ಯುವ, ವಸತಿ, ಮೇಲ್ವಿಚಾರಣೆ, ಸಾಂಸ್ಕøತಿಕ, ಆಹಾರ ಹಾಗೂ ಮಹಿಳಾ ಸಮಿತಿಗಳನ್ನು ರಚಿಸಲಾಗಿದೆ.
ಸಮ್ಮೇಳನಕ್ಕೆ ಚುನಾಯಿತ ಪ್ರತಿನಿಧಿಗಳು, ಸಾಹಿತಿಗಳು, ಗಣ್ಯರು ಹಾಗೂ ಇತರರಿಗೆ ಆಮಂತ್ರಣ ನೀಡುವುದಕ್ಕಾಗಿ ಒಂದು ಸಾವಿರ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಲಾಗಿದೆ. 10 ಸಾವಿರ ಅಂಚೆ ಕಾರ್ಡ್ಗಳನ್ನು ಕಳುಹಿಸಿ, ಸದಸ್ಯರಿಗೆ ಸಮ್ಮೇಳನಕ್ಕೆ ಆಹ್ವಾನಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ತಿಳಿಸಿದ್ದಾರೆ.
ಈಗಾಗಲೇ ಸಮ್ಮೇಳನದ ಪ್ರಚಾರಾರ್ಥವಾಗಿ ನಗರದಾದ್ಯಂತ ಕಟೌಟ್, ಬ್ಯಾನರ್ಗಳನ್ನು ಅಳವಡಿಸಲಾಗಿದೆ. ಆಟೊ, ಸಾಮಾಜಿಕ ಜಾಲ ತಾಣ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ಸಮ್ಮೇಳನದ ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳು ಜರುಗಲಿವೆ. ರಂಗ ಮಂದಿರದಲ್ಲಿ ಮಳಿಗೆಗಳು, ವಿವಿಧ ಪ್ರದರ್ಶನಗಳು ಇರಲಿವೆ. ಎರಡು ದಿನ ಸಮ್ಮೇಳನದಲ್ಲಿ ಪಾಲ್ಗೊಳ್ಳುವವರಿಗೆ ಊಟದ ವ್ಯವಸ್ಥೆ ಇರಲಿದೆ ಎಂದು ತಿಳಿಸಿದ್ದಾರೆ.
ವಿವಿಧ ಸಮಿತಿಗಳ ಪ್ರಮುಖರು
ಸ್ವಾಗತ ಸಮಿತಿ: ಸೂರ್ಯಕಾಂತ ನಾಗಮಾರಪಳ್ಳಿ, ಬಾಬುವಾಲಿ, ಡಾ. ರಜನೀಶ್ ವಾಲಿ, ಹಾವಶೆಟ್ಟಿ ಪಾಟೀಲ, ಜಯರಾಜ ಖಂಡ್ರೆ, ಶರಣಪ್ಪ ಮಿಠಾರೆ, ಶ್ರೀಕಾಂತ ಸ್ವಾಮಿ, ಸೋಮನಾಥ ಕಂದಗೂಳೆ, ಬಾಬುರಾವ್ ದಾನಿ, ಪ್ರಭು ವಸ್ಮತೆ, ಶ್ಯಾಮರಾವ್ ಭೀಮರಾವ್, ವಿಜಯಕುಮಾರ ಆನಂದೆ.
ಮೆರವಣಿಗೆ ಸಮಿತಿ: ರಾಜೇಂದ್ರ ಮಣಗೇರಿ, ರಮೇಶ ಬಿರಾದಾರ ಚಿಟ್ಟಾ, ಪರಮೇಶ್ವರ ಬಿರಾದಾರ, ಸಂತೋಷ್ ಮಂಗಳೂರೆ, ವಿಜಯಕುಮಾರ ಪಾಟೀಲ ಯರನಳ್ಳಿ, ಲಕ್ಷ್ಮಣ ಪೂಜಾರಿ, ಸಂತೋಷ್ ಸೋಲಪುರ, ನರಸಾರೆಡ್ಡಿ.
ಪ್ರಚಾರ ಸಮಿತಿ: ನಾಗೇಶ ಪ್ರಭಾ, ವಿಜಯಕುಮಾರ ಸೋನಾರೆ, ವಿನಯ ಮಾಳಗೆ, ಎಂ.ಎಸ್. ಮನೋಹರ, ಯೋಗೇಶ್ ಮಠ, ಬಸವರಾಜ ಬಿರಾದಾರ, ಶಿವಲಿಂಗ ಹೇಡೆ, ಪ್ರಭು ಮಡಿವಾಳ.
ಸ್ಮರಣ ಸಂಚಿಕೆ ಸಮಿತಿ: ಡಾ. ಈಶ್ವರಯ್ಯ ಕೊಡಂಬಲ್, ಪ್ರೊ. ಜಗನ್ನಾಥ ಕಮಲಾಪುರೆ, ದೇವೇಂದ್ರ ಕರಂಜೆ, ಪ್ರೊ. ಶಿವಕುಮಾರ ಕಟ್ಟೆ, ಡಾ. ರಾಜಕುಮಾರ ಅಲ್ಲೂರೆ, ಅಕ್ಷಯ ಗ್ರಾಫಿಕ್ಸ್, ಟಿ.ಎಂ. ಮಚ್ಚೆ, ಸಂಗಮೇಶ ಜ್ಯಾಂತೆ, ಡಾ. ಶಿವಶಂಕರ ಟೋಕರೆ.
ವೇದಿಕೆ ಸಮಿತಿ: ಪ್ರೊ. ಜಗನ್ನಾಥ ಕಮಲಾಪುರೆ, ಧರ್ಮವೀರ ಬಿರಾದಾರ, ಡಾ. ವಿದ್ಯಾವತಿ ಬಲ್ಲೂರೆ, ದೇವೇಂದ್ರ ಕರಂಜೆ, ಡಾ. ಮನ್ಮಥ ಡೋಳೆ, ಡಾ. ಈಶ್ವರಯ್ಯ ಕೊಡಂಬಲ್, ಸಿದ್ಧಾರೂಢ ಭಾಲ್ಕೆ, ಶಂಕರ ಕೊಳಾರ, ಯೋಗೇಂದ್ರ ಯದಲಾಪುರೆ, ಜಗದೀಶ್ ಶಿವಯೋಗಿ.
ಯುವ ಸಮಿತಿ: ಶಿವಕುಮಾರ ಸಾಲಿ, ಚಂದ್ರಕಾಂತ ಪಡಶೆಟ್ಟಿ, ಶಂಕರರಾವ್ ಕೋಲಾರ್, ಬಸವರಾಜ ಬಶೆಟ್ಟಿ, ಅಣ್ಣೆಪ್ಪ ಆಳ್ವಾ, ಗಣೇಶ ಶೀಲವಂತ, ಸಂಗಮೇಶ ನೇಳಗೆ, ರೇವಣಪ್ಪ ಹಳಕಾಯಿ.
ವಸತಿ ಸಮಿತಿ: ಸೋಮನಾಥ ಕಂದಗೂಳೆ, ಬಸಯ್ಯ ಹಿರೇಮಠ, ಯೋಗೇಶ ಸಿರಿಗೇರೆ, ಪಂಚಾಕ್ಷರಿ ಮಲ್ಲಿಕಾರ್ಜುನ, ಶಂಕರ ಮಲ್ಲಶೆಟ್ಟಿ, ವಿರೂಪಾಕ್ಷ ದೇವರು, ಬಸವರಾಜ ಬಿರಾದಾರ, ಮಹೇಶ ಮಜಗೆ.
ಮೇಲ್ವಿಚಾರಣಾ ಸಮಿತಿ: ಜಯಶ್ರೀ ಸುಕಾಲೆ, ಡಾ. ಶಿವಲೀಲಾ ಮಠಪತಿ, ಪುಣ್ಯವತಿ ವಿಸಾಜಿ, ರೇಖಾ ಅಪ್ಪಾರಾವ್ ಸೌದಿ, ರಾಜಮ್ಮ ಚಿಕ್ಕಪೇಟೆ, ರೂಪಾ ಜಗದೀಶ್, ಶಕುಂತಲಾ ಪಾಚಂಗೆ, ಲಕ್ಷ್ಮಿಬಾಯಿ ಸೀಗಿ.
ಸಾಂಸ್ಕøತಿಕ ಸಮಿತಿ: ವೈಜಿನಾಥ ಸಜ್ಜನಶೆಟ್ಟಿ, ಶಿವಕುಮಾರ ಪಾಂಚಾಳ, ಶಂಭುಲಿಂಗ ವಾಲ್ದೊಡ್ಡಿ, ಪೂರ್ಣಚಂದ್ರ ಮೈನಾಳೆ, ಜಯಶ್ರೀ ಸಣ್ಮಣಿ, ಆದಿತ್ಯ ಪಾಂಚಾಳ, ಪವಿತ್ರಾ ಮಹಾದೇವ, ರೇಣುಕಾ ಎನ್.ಬಿ.
ಆಹಾರ ಸಮಿತಿ: ಅಶೋಕ ದಿಡಗೆ, ಆನಂದ ಪಾಟೀಲ, ಶಂಕರರಾವ್ ಸಜ್ಜನಶೆಟ್ಟಿ, ಸೂರ್ಯಕಾಂತ ಕೋಟೆ, ಮಂಜುನಾಥ ಮುದ್ದಾ, ಆಕಾಶ್ ಕೋಟೆ, ಜಗನ್ನಾಥ ಶಿವಕುಮಾರ, ಸಂಗ್ರಾಮ ಬಸಣ್ಣನೋರ.
ಮಹಿಳಾ ಸಮಿತಿ: ರತ್ನಾ ಪಾಟೀಲ, ಜಯದೇವಿ ಯದಲಾಪುರೆ, ಜಗದೇವಿ ದುಬಲಗುಂಡೆ, ಶೀಲಾವತಿ ಶೀಲವಂತ, ಸಾಧನಾ ರಂಜೋಳಕರ್, ಭಾರತಿ ವಸ್ತ್ರದ್, ಕೀರ್ತಿಲತಾ ಹೊಸಳ್ಳೆ, ರೂಪಾ ಪಾಟೀಲ, ಶ್ರೀದೇವಿ ಪಾಟೀಲ.
ಶಿಕ್ಷಕರು, ಉಪನ್ಯಾಸಕರಿಗೆ ಒಒಡಿ ಸೌಲಭ್ಯ
22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳ ಬಯಸುವ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಶಾಲಾ ಶಿಕ್ಷಣ ಇಲಾಖೆ ಒಒಡಿ ಸೌಲಭ್ಯ ಕಲ್ಪಿಸಿದೆ.
ಶಿಕ್ಷಕರು ಹಾಗೂ ಉಪನ್ಯಾಸಕರು ಒಒಡಿ ಪ್ರಯೋಜನ ಪಡೆಯಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಕೋರಿದ್ದಾರೆ.
ಕನ್ನಡ, ಸಾಹಿತ್ಯ ಸೇವೆಗೆ ಒಲಿದ ಸಮ್ಮೇಳನಾಧ್ಯಕ್ಷ ಗೌರವ
ಕನ್ನಡ ಭಾಷೆ ಹಾಗೂ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಸಾಹಿತಿ ಡಾ. ಬಸವರಾಜ ಬಲ್ಲೂರ ಅವರಿಗೆ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೌರವ ಒಲಿದಿದೆ.
ಬೀದರ್ನ ಕರ್ನಾಟಕ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿರುವ, ಔರಾದ್ ತಾಲ್ಲೂಕಿನ ಬಲ್ಲೂರ(ಜೆ) ಗ್ರಾಮದ ಬಸವರಾಜ ಬಲ್ಲೂರ ಜಿಲ್ಲೆಯ ಹಿರಿಯ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ. ವೃತ್ತಿ ಜತೆಗೆ ಕನ್ನಡ ಹಾಗೂ ಸಾಹಿತ್ಯ ಸೇವೆಯಲ್ಲಿ ನಿರಂತರ ತೊಡಗಿಸಿಕೊಂಡಿದ್ದಾರೆ.
ಯುವಕರು, ಲೇಖಕರು, ಬರಹಗಾರರಿಗೆ ಮಾಗದರ್ಶಿಯಾಗಿದ್ದಾರೆ. ಸಾಹಿತ್ಯ ರಚನೆಗೆ ಪ್ರೇರಣೆ ನೀಡುತ್ತ ಬಂದಿದ್ದಾರೆ. ಅನೇಕರ ಕೃತಿಗಳ ಪ್ರಕಟಣೆಗೆ ನೆರವಾಗಿದ್ದಾರೆ.
ಈವರೆಗೆ ಡಾ. ಬಸವರಾಜ ಬಲ್ಲೂರ ಅವರ ಸುಮಾರು ಕೃತಿಗಳು ಪ್ರಕಟವಾಗಿವೆ. ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಮಾಜ ಸೇವೆಗಾಗಿ ಅವರಿಗೆ ಅನೇಕ ಪ್ರಶಸ್ತಿ, ಸಮ್ಮಾನಗಳು ಹುಡುಕಿಕೊಂಡು ಬಂದಿವೆ.