

ಕಮಲನಗರ: ತಾಲೂಕಿನ ಖೇಡ-ಸಂಗಮ ಗ್ರಾಮದ ಚನ್ನಬಸವ ಪಟ್ಟದ್ದೇವರ ಗುರುಕುಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಶಾಲೆಯ ಮುಖ್ಯಶಿಕ್ಷಕ ಸಂಜಯಕುಮಾರ ಮೆಂಗಾ ಪೂಜೆ ಸಲ್ಲಿಸಿ ಮಾತನಾಡಿ, ರಾಮಾಯಣ ಮಹಾಕಾವ್ಯ ರಚಿಸಿದವರು ಮಹರ್ಷಿ ವಾಲ್ಮೀಕಿಯವರು. ಅವರು ರಾಮಾಯಣದಲ್ಲಿ ಉಲ್ಲೇಖಿಸಿರುವ ಅಂಶಗಳು ಇಂದಿಗೂ ಎಂದೆಂದಿಗೂ ಪ್ರಸ್ತುತವಾಗಿವೆ. ರಾಮಾಯಣದ ಮೌಲ್ಯಗಳು ಭವಿಷ್ಯಕ್ಕೆ ದಾರಿದೀಪವಾಗಿವೆ. ಆದಿಕವಿ ಹೇಳಿಕೊಟ್ಟ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಶಿಕ್ಷಕರಾದ ಶಿವಕುಮಾರ ಸ್ವಾಮಿ, ಲಕ್ಷ್ಮಣ.ಎಚ್., ಬಸವರಾಜ ಚಿಂದೆ, ಸುರೇಶ ನೀಲಮಠ, ಅನಿಲ ಬೆಳಕೆಟ್ಟೆ, ರತ್ನಮ್ಮ ಚಿಂದೆ, ಜ್ಯೋತಿ ನೀಲಮಠ ಇತರರಿದ್ದರು.
ಖತಗಾಂವ :ಖತಗಾಂವ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಮುಖ್ಯ ಶಿಕ್ಷಕ ಶ್ರೀನಿವಾಸ ಮಂಠಾಳಕರ್ ಪೂಜೆ ಸಲ್ಲಿಸಿದರು. ಶಿಕ್ಷಕರಾದ ಮಲಮ್ಮ ಕಸ್ತೂರೆ, ಸಿದ್ರಾಮಪ್ಪ ಬಿರಾದಾರ, ಅತಿಥಿ ಶಿಕ್ಷಕರಾದ ಶ್ರೀಪಾದ ಕುಲಕರ್ಣಿ, ರಚಿತಾ ಗುಡಮೆ, ಕಲ್ಪನಾ ಇತರರಿದ್ದರು.
ಮುಧೋಳ(ಬಿ) : ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಸೋಮವಾರ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪಿಕೆಪಿಎಸ್ ಅಧ್ಯಕ್ಷ ಗುರುನಾಥ ವಟಗೆ ಪೂಜೆ ಸಲ್ಲಿಸಿ ಮಾತನಾಡಿದರು. ಕಾರ್ಯದರ್ಶಿ ಬಸವರಾಜ ಸ್ವಾಮಿ, ಉಪಾಧ್ಯಕ್ಷ ವಿಠ್ಠಲರಾವ ಬೊರಗಾಂವೆ, ಸದಸ್ಯರಾದ ರಾಜಕುಮಾರ ಬಿಚಕುಂದೆ, ರಾಜಕುಮಾರ ಜಾಧವ್, ಬಾಬುರಾವ ರಕ್ಷ್ಯಾಳೆ, ನಾಗಯ್ಯ ಸ್ವಾಮಿ, ವಿಶ್ವನಾಥ ಹಲ್ಲಾಳೆ, ಪಂಢರಿ ಶೇರಿಕಾರ, ಶಿವಾಜಿರಾವ ಬಿರಾದಾರ, ಕಲಿಮೋದ್ದೀನ್, ಸಂಗೀತಾ ಗುಡ್ಡಾ, ಸುನೀತಾ ಸೋಲ್ಲಾಪುರೆ ಇತರರಿದ್ದರು.