ವಿದ್ಯಾರ್ಥಿಗಳು ಬರಲಿ ಹೊಸ ಸಂಶೋಧನಾ ಕ್ಷೇತ್ರಕ್ಕೆ

ಬಸವಕಲ್ಯಾಣದ  ಹರಳಯ್ಯನವರ ಗವಿಯಲ್ಲಿ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ನಿಮಿತ್ತ ಬುಧವಾರ ಆಯೋಜಿಸಿದ್ದ  ಕಾರ್ಯಕ್ರಮದಲ್ಲಿ ಡಾ. ರಾಮನಗೌಡ ನಾಡಗೌಡ ಹಾಗೂ ಡಾ.ತೇಜಸ್ವಿ ಕೆ. ಅವರಿಗೆ ಶರಣ ವಿಜ್ಞಾನಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಪೂಜ್ಯ ಡಾ.ಗಂಗಾಂಬಿಕಾ ಅಕ್ಕ,  ಡಾ.ಸಿ.ವೀರಣ್ಣ, ಡಾ.ಅಮರನಾಥ ಸೋಲಪುರೆ, ಡಾ.ಬಸವರಾಜ ಎವಲೆ, ರವೀಂದ್ರ ಕೊಳಕುರ, ಶಿವಕುಮಾರ ಬಿರಾದಾರ, ಆಕಾಶ ಖಂಡಾಳೆ, ವೃಶಾಲಿ ನಾಗರಾಳೆ ಇತರರಿದ್ದರು.
ಬಸವಕಲ್ಯಾಣದ ಹರಳಯ್ಯನವರ ಗವಿಯಲ್ಲಿ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ನಿಮಿತ್ತ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ರಾಮನಗೌಡ ನಾಡಗೌಡ ಹಾಗೂ ಡಾ.ತೇಜಸ್ವಿ ಕೆ. ಅವರಿಗೆ ಶರಣ ವಿಜ್ಞಾನಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಪೂಜ್ಯ ಡಾ.ಗಂಗಾಂಬಿಕಾ ಅಕ್ಕ, ಡಾ.ಸಿ.ವೀರಣ್ಣ, ಡಾ.ಅಮರನಾಥ ಸೋಲಪುರೆ, ಡಾ.ಬಸವರಾಜ ಎವಲೆ, ರವೀಂದ್ರ ಕೊಳಕುರ, ಶಿವಕುಮಾರ ಬಿರಾದಾರ, ಆಕಾಶ ಖಂಡಾಳೆ, ವೃಶಾಲಿ ನಾಗರಾಳೆ ಇತರರಿದ್ದರು.
Published on: 

ಬಸವಕಲ್ಯಾಣ: ವಿದ್ಯಾರ್ಥಿಗಳು ಸಂಶೋಧನಾ ಮನೋಭಾವ ಬೆಳೆಸಿಕೊಳ್ಳಬೇಕು. ಹೊಸ ಸಂಶೋಧನಾ ಕ್ಷೇತ್ರಗಳಲ್ಲಿ ಬರಬೇಕು ಎಂದು ಎಂದು ಬೆಂಗಳೂರು ಯು.ಆರ್​.ರಾವ್​, ಉಪಗ್ರಹ ಕೇಂದ್ರದ ಮಾಜಿ ಸಹಾಯಕ ನಿರ್ದೇಶಕ ಡಾ.ರಾಮನಗೌಡ ನಾಡಗೌಡ ಸಲಹೆ ನೀಡಿದರು.

ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಹಯೋಗದಡಿ ಹರಳಯ್ಯ ಗವಿಯಲ್ಲಿ ಶರಣ ವಿಜಯೋತ್ಸವ ನಾಡಹಬ್ಬ, ಹುತಾತ್ಮ ದಿನಾಚರಣೆಯ ನಾಲ್ಕನೇ ದಿನ ಬುಧವಾರ ಆಯೋಜಿಸಿದ್ದ ಯುವ ವೈಜ್ಞಾನಿಕ ಸಮಾವೇಶ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಶರಣ ವಿಜ್ಞಾನಿ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಅವರು, ದೇಶದ ಸರ್ವತೋಮುಖ ಬೆಳವಣಿಗೆ ಮತ್ತು ಜನಜೀವನ ಮಟ್ಟ ಸುಧಾರಣೆ ಹೊಸ ಸಂಶೋಧನೆಗಳು ಅವಶ್ಯಕ ಎಂದರು.

ಜಗತ್ತಿಗೆ ಸಮಾನತೆ ಮತ್ತು ಜ್ಞಾನದ ಬೆಳಕು ನೀಡಿದ ಪವಿತ್ರ ಭೂಮಿ ಕಲ್ಯಾಣ. ಬಸವಾದಿ ಶರಣರ ತತ್ವಗಳನ್ನು ಇಂದು ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ಪವಿತ್ರ ನೆಲದಲ್ಲಿರುವ ತಾವುಗಳು ಮನಸ್ಸು ಮತ್ತು ಪ್ರಯತ್ನದಿಂದ ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು. ಸಾಧನೆಗೆ ಮನಸ್ಸು, ವಿಶ್ವಾಸ ಮತ್ತು ಪ್ರಯತ್ನ ಮುಖ್ಯ. ಪ್ರತಿಭೆ ಮತ್ತು ಜ್ಞಾನ ಬೆಳೆಸಿಕೊಳ್ಳಬೇಕು. ಅಂದಾಗ ಅವಕಾಶಗಳ ದಾರಿ ತೆರೆದುಕೊಳ್ಳುತ್ತವೆ ಎಂದು ಹೇಳಿದರು.

ಹೈದರಾಬಾದ್​ನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ)ಯ ವಿಜ್ಞಾನಿ ಎಫ್​ ಡಾ.ತೇಜಸ್ವಿ ಕೆ. ಮಾತನಾಡಿ, ಜ್ಞಾನ, ಅರ್ಹತೆ ಶ್ರಮ ಬಯಸುವ ಕ್ಷೇತ್ರ ಸಂಶೋಧನೆಯಾಗಿದೆ. ಪದವಿ ಓದುವ ವಿದ್ಯಾರ್ಥಿಗಳು ಮುಂದೆ ವೈಜ್ಞಾನಿಕ ಸಂಶೋಧನಾ ಕ್ಷೇತ್ರಕ್ಕೆ ಬರುವಂತಾಗಬೇಕು ಎಂದರು.

ಉದ್ಘಾಟನೆ ನೆರವೇರಿಸಿದ ಬೀದರ್​ ಪಶುವೈದ್ಯಕಿಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಸಿ.ವೀರಣ್ಣ ಮಾತನಾಡಿ, ವೈಜ್ಞಾನಿಕ ನೆಲೆಗಟ್ಟಿನ ಮೇಲೆ ವಚನ ಸಾಹಿತ್ಯ ಹುಟ್ಟಿದೆ. ಪ್ರತಿಯೊಂದು ವಚನದಲ್ಲಿ ವೈಚಾರಿಕ, ವೈಜ್ಞಾನಿಕ ಜ್ಞಾನವಿದೆ. ಪ್ರತಿಯೊಬ್ಬರೂ ಇವುಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಮಾತನಾಡಿ, ವಚನಗಳು ಕೇವಲ ಭಕ್ತಿಯ ಅಭಿವ್ಯಕ್ತಿಗಳಲ್ಲ , ಅವುಗಳಲ್ಲಿ ಪ್ರಶ್ನಿಸುವ ಮನೋಭಾವ, ವಿಚಾರಶೀಲತೆ, ಅನುಭವ ಮಾನವೀಯತೆ ಮತ್ತು ಸಾಮಾಜಿಕ ಸುಧಾರಣೆಯ ಆಶಯಗಳಿವೆ. ಮನುಷ್ಯ ತನ್ನ ವಿವೇಕದಿಂದ ಸತ್ಯವನ್ನು ಅರಿಯಬೇಕು ಎಂಬ ಚಿಂತನೆಗೆ ವಚನ ಸಾಹಿತ್ಯದಲ್ಲಿ ಮಹತ್ವವಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಡೀನ್​ ಡಾ. ಅಮರನಾಥ ಸೋಲಪುರೆ ಮಾತನಾಡಿದರು. ನಿವೃತ್ತ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸಿ.ಎಸ್​.ರಗಟೆ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಕಲಬುರಗಿಯ ನಿರ್ದೇಶಕ ಡಾ.ಬಸವರಾಜ ಎವಲೆ, ರಾಷ್ಟ್ರೀಯ ಬಸವದಳದ ಅಧ್ಯಕ್ಷ ರವೀಂದ್ರ ಕೊಳಕೂರ, ಶಿವಕುಮಾರ ಬಿರಾದಾರ, ಸಂಕಲ್ಪ ಕಾಲೇಜಿನ ನಿರ್ದೇಶಕಿ ವೃಶಾಲಿ ನಾಗರಾಳೆ ಇತರರಿದ್ದರು. ಆಕಾಶ ಖಂಡಾಳೆ ಸ್ವಾಗತಿಸಿದರು. ಅಂಬ್ರೀಷ ಭಿಮಾಣೆ ನಿರೂಪಣೆ ಮಾಡಿದರು.

ಶರಣ ವಿಜ್ಞಾನಿ ಪುರಸ್ಕಾರ: ಇಸ್ರೋದ ವಿವಿಧ ಯೋಜನೆಗಳ ಯಶಸ್ವಿಗಾಗಿ ಶ್ರಮಿಸಿದ ಡಾ. ರಾಮನಗೌಡ ನಾಡಗೌಡ ಹಾಗೂ ಡಿಆರ್​ಡಿಒ ವಿವಿಧ ಯೋಜನೆಗಳ ಯಶಸ್ವಿಗಾಗಿ ಶ್ರಮಿಸಿದ ಡಾ.ತೇಜಸ್ವಿ ಕೆ. ಅವರಿಗೆ ಶರಣ ವಿಜ್ಞಾನಿ ಪುರಸ್ಕಾರ ನೀಡಿ ಗೌರವಿಸಲಾಯಿತು.

ವಿದ್ಯಾರ್ಥಿಗಳೊಂದಿಗೆ ವಿಜ್ಞಾನಿಗಳ ಸಂವಾದ

ವಿದ್ಯಾಥಿಗಳೊಂದಿನ ಸಂವಾದದದಲ್ಲಿ ವಿದ್ಯಾರ್ಥಿಗ ಪ್ರಶ್ನೆಗಳಿಗೆ ವಿಜ್ಞಾನಿಗಳಾದ ಡಾ. ರಾಮನಗೌಡ ನಾಡಗೌಡ ಹಾಗೂ ಡಾ.ತೇಜಸ್ವಿ. ಕೆ. ಉತ್ತರಿಸಿದರು. ವೈಶಾಲಿ, ನೀಲಾಂಬಿಕಾ, ಶೃದ್ಧಾ, ಶ್ವೇತಾ ಮಹಾಗಾಂವೆ, ದೀಪಿಕಾ ಸೇರಿ ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು ಸಂವಾದ ನಡೆಸಿದರು.

ಯುವ ಜನಾಂಗವೇ ದೇಶದ ಆಸ್ತಿ. ವಿದ್ಯಾರ್ಥಿಗಳು ವೈಜ್ಞಾನಿಕತೆ, ವೈಚಾರಿಕತೆ ಬೆಳೆಸಿಕೊಳ್ಳಬೇಕು. ಪ್ರಶ್ನೆ ಕೇಳುವ, ತರ್ಕ ಮಾಡುವ ಮನೋಭಾವ ಬೆಳೆಸಿಕೊಂಡಾಗ ವೈಜ್ಞಾನಿಕತೆ ಬೆಳೆಯುತ್ತದೆ. ಬುದ್ಧಿವಂತಿಕೆಯ ಜತೆಗೆ ಶ್ರಮ ಬೇಕು. ಅಂದಾಗ ಸಾಧನೆ ಮಾಡಲು ಸಾಧ್ಯವಾಗುತ್ತದೆ.
> ಡಾ.ಸಿ.ವೀರಣ್ಣ ಕುಲಪತಿ, ಪಶುವೈದ್ಯಕಿಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net