ಆನ್​ಲೈನ್​ ಬಗ್ಗೆ ಮಕ್ಕಳು ಜಾಗೃತರಾಗಿರಲಿ

ಹುಮನಾಬಾದ್​ ತಾಲೂಕಿನ ಹಳ್ಳಿಖೇಡ(ಬಿ)ದ ಬಸವತೀರ್ಥ ವಿದ್ಯಾಪಿಠ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಸುರಕ್ಷಿತ ಬಾಲ್ಯ ಅಭಿಯಾನವನ್ನು ತಾಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ನಾತೆ  ಉದ್ಘಾಟಿಸಿದರು. ಪ್ರಮುಖರಾದ ಕೇಶವರಾವ ತಳಘಟಕರ, ದಿನೇಶ ಕೊಂಡಾ, ಮಲ್ಲಿಕಾರ್ಜುನ ಪ್ರಭಾ, ಬಸಲಿಂಗಪ್ಪ ದೊಡ್ಡಮನಿ, ರವಿರಾಜ ಭಮ್ಮಶೆಟ್ಟಿ ಇತರರಿದ್ದರು.

Published on: 

ಹುಮನಾಬಾದ್​: ಇಂದಿನ ಡಿಜಿಟಲ್​ ಯುಗದಲ್ಲಿ ಮಕ್ಕಳು ಮೊಬೈಲ್​ ಹಾಗೂ ಅಂತರ್ಜಾಲ ಬಳಸುವಾಗ ಜಾಗರೂಕರಾಗಿರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳದಿರುವುದು, ಅಪರಿಚಿತರು ಕಳುಹಿಸುವ ಲಿಂಕ್​ಗಳನ್ನು ತೆರೆಯದಿರುವುದು ಹಾಗೂ ಆನ್​ಲೈನ್​ನಲ್ಲಿ ಯಾವುದೇ ರೀತಿಯ ಕಿರುಕುಳ ಎದುರಾದರೆ ತಕ್ಷಣ ಪಾಲಕರು ಅಥವಾ ಶಿಕ್ಷಕರ ಗಮನಕ್ಕೆ ತರುವುದು ಅಗತ್ಯ ಎಂದು ತಾಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ನಾತೆ ಹೇಳಿದರು.

ತಾಲೂಕಿನ ಹಳ್ಳಿಖೇಡ(ಬಿ)ದ ಬಸವತೀರ್ಥ ವಿದ್ಯಾಪಿಠ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಶಾಲಾ ಶಿಕ್ಷಣ ಇಲಾಖೆ, ಬಸವತೀರ್ಥ ವಿದ್ಯಾಪಿಠ ಮತ್ತು ಬೀದರ್​ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಸುರಕ್ಷಿತ ಬಾಲ್ಯ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಅಂತರ್ಜಾಲದ ಬಳಕೆಯಿಂದ ಜ್ಞಾನಾರ್ಜನೆಗೆ ಹಲವು ಅವಕಾಶಗಳು ದೊರೆಯುತ್ತವೆ. ಆದರೆ, ಅದರ ದುರ್ಬಳಕೆಯಿಂದ ಸೈಬರ್​ ವಂಚನೆ, ಆನ್​ಲೈನ್​ ಕಿರುಕುಳ ಹಾಗೂ ವೈಯಕ್ತಿಕ ಮಾಹಿತಿಯ ದುರುಪಯೋಗದಂತಹ ಅಪಾಯಗಳು ಎದುರಾಗಬಹುದು. ಆದ್ದರಿಂದ ಮಕ್ಕಳು ತಂತ್ರಜ್ಞಾನವನ್ನು ಸುರಕ್ಷಿತವಾಗಿ ಬಳಸುವ ವಿಧಾನಗಳನ್ನು ತಿಳಿದುಕೊಳ್ಳುವುದರ ಜೊತೆಗೆ ತಮ್ಮ ಹಕ್ಕುಗಳು ಮತ್ತು ಕಾನೂನು ರಕ್ಷಣೆಯ ಬಗ್ಗೆಯೂ ಅರಿವು ಹೊಂದಿರಬೇಕು ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ದಿನೇಶ ಕೊಂಡ ಮಾತನಾಡಿದರು. ಬಸವತೀರ್ಥ ವಿದ್ಯಾಪಿಠ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಕೇಶವರಾವ್​ ತಲಘಟ್ಕರ್​ ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ಮಲ್ಲಿಕಾರ್ಜುನ ಪ್ರಭಾ, ಬಸಲಿಂಗಪ್ಪ ದೊಡ್ಡಮನಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರತಿನಿಧಿ ರವಿರಾಜ ಭಮ್ಮಶೆಟ್ಟಿ ಇತರರಿದ್ದರು.