

ಬೀದರ್: ದಲಿತ ಸಮುದಾಯದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ನ. 1 ರಂದು ಬೆಳಿಗ್ಗೆ 11ಕ್ಕೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಖಂಡ್ರೆ ಅವರು ತಾಲ್ಲೂಕಿನ ಅತಿವಾಳ ಸಮೀಪ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಾಂಸ್ಕøತಿಕ ಕೇಂದ್ರಕ್ಕೆ ರಾಜ್ಯ ಸರ್ಕಾರದಿಂದ 10 ಎಕರೆ ಜಮೀನು ಹಾಗೂ ರೂ. 15 ಕೋಟಿ ಅನುದಾನ ಮಂಜೂರು ಮಾಡಿಸಿ ದಲಿತ ಸಮುದಾಯದ ಬಹು ದಿನಗಳ ಬೇಡಿಕೆ ಈಡೇರಿಸಿದ್ದಾರೆ. ಹೀಗಾಗಿ ಅವರಿಗೆ ಅಭಿನಂದನೆ ಸಲ್ಲಿಸಲಾಗುತ್ತಿದೆ ಎಂದು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದಕುಮಾರ ಅಪ್ಪೆ ತಿಳಿಸಿದ್ದಾರೆ.
ರೂ. 50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕೇಂದ್ರವು ಶೈಕ್ಷಣಿಕ, ಸಾಂಸ್ಕøತಿಕ ಹಾಗೂ ಸಾಮಾಜಿಕ ಜಾಗೃತಿಯ ಪ್ರಮುಖ ಕೇಂದ್ರವಾಗಿ ರೂಪುಗೊಳ್ಳಲಿದೆ ಎಂದು ಹೇಳಿದ್ದಾರೆ.
ಅಭಿನಂದನಾ ಸಮಾರಂಭದಲ್ಲಿ ದಲಿತ ಸಮಾಜದವರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅಭಿನಂದನಾ ಸಮಿತಿಯ ವಿನೋದಕುಮಾರ ಅಪ್ಪೆ, ವಿಠ್ಠಲದಾಸ್ ಪ್ಯಾಗೆ, ವಿಜಯಕುಮಾರ ಸೋನಾರೆ, ಮಾರುತಿ ಭಂಗೂರೆ, ಪ್ರಶಾಂತ ದೊಡ್ಡಿ, ವಿನಯ್ ಮಾಳಗೆ, ವಿನೋದ ಬಂದಗೆ, ಸೂರ್ಯಕಾಂತ ಸಾಧುರೆ ಹಾಗೂ ಶಿವಕುಮಾರ ನೀಲಕಟ್ಟಿ ಮನವಿ ಮಾಡಿದ್ದಾರೆ.