ಮನುಷ್ಯರ ಪ್ರೀತಿಸುವ ಹಾರಕೂಡ ಮಠ

ಬಸವಕಲ್ಯಾಣ ತಾಲೂಕಿನ ಸಿರಗಾಪುರದಲ್ಲಿ ಭಾನುವಾರ ಆಯೋಜಿಸಿದ್ದ ಹಾರಕೂಡ ಶ್ರೀಗಳ ೬೩ನೇ ಜನ್ಮದಿನೋತ್ಸವ ಮತ್ತು ತುಲಾಭಾರ ಕಾರ್ಯಕ್ರಮವನ್ನು ಶಾಸಕ ಶರಣು ಸಲಗರ ಉದ್ಘಾಟಿಸಿದರು. ಶ್ರೀ ಡಾ.ಚನ್ನವೀರ ಶಿವಾಚಾರ್ಯ, ಶ್ರೀ ಶಿವಲಿಂಗ  ಸ್ವಾಮೀಜಿ, ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ಮಾಜಿ ಸಂಸದ ಡಾ.ಉಮೇಶ ಜಾಧವ್, ಕಾಡಾ ಅಧ್ಯಕ್ಷ ಬಾಬು ಹೊನ್ನಾನಾಯಕ, ರಾಜಕುಮಾರ ಬಿರಾದಾರ, ಜಗನ್ನಾಥ ಪಾಟೀಲ್, ರಾಜಕುಮಾರ ಯಾಚೆ, ಸದಾನಂದ ಪಾಟೀಲ್ ಇತರರಿದ್ದರು.
ಬಸವಕಲ್ಯಾಣ ತಾಲೂಕಿನ ಸಿರಗಾಪುರದಲ್ಲಿ ಭಾನುವಾರ ಆಯೋಜಿಸಿದ್ದ ಹಾರಕೂಡ ಶ್ರೀಗಳ ೬೩ನೇ ಜನ್ಮದಿನೋತ್ಸವ ಮತ್ತು ತುಲಾಭಾರ ಕಾರ್ಯಕ್ರಮವನ್ನು ಶಾಸಕ ಶರಣು ಸಲಗರ ಉದ್ಘಾಟಿಸಿದರು. ಶ್ರೀ ಡಾ.ಚನ್ನವೀರ ಶಿವಾಚಾರ್ಯ, ಶ್ರೀ ಶಿವಲಿಂಗ ಸ್ವಾಮೀಜಿ, ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ಮಾಜಿ ಸಂಸದ ಡಾ.ಉಮೇಶ ಜಾಧವ್, ಕಾಡಾ ಅಧ್ಯಕ್ಷ ಬಾಬು ಹೊನ್ನಾನಾಯಕ, ರಾಜಕುಮಾರ ಬಿರಾದಾರ, ಜಗನ್ನಾಥ ಪಾಟೀಲ್, ರಾಜಕುಮಾರ ಯಾಚೆ, ಸದಾನಂದ ಪಾಟೀಲ್ ಇತರರಿದ್ದರು.
Published on
ಬಸವಕಲ್ಯಾಣ: ಜಾತ್ಯತೀತ ಮತ್ತು ಧರ್ಮಾತೀತವಾಗಿರುವ ಹಾರಕೂಡದ ಸಂಸ್ಥಾನ ಹಿರೇಮಠ ಮನುಷ್ಯರನ್ನು ಪ್ರೀತಿಸುವ ಮಠವಾಗಿದೆ ಎಂದು ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯ ನುಡಿದರು.
ಸಿರಗಾಪುರ ಗ್ರಾಮದ ಶ್ರೀ ಮಹಾದೇವ ದೇವಸ್ಥಾನ ಪರಿಸರದಲ್ಲಿ ಭಾನುವಾರ ತಮ್ಮ ೬೩ನೇ ಜನ್ಮದಿನೋತ್ಸವದಲ್ಲಿ ಭಕ್ತರಿಂದ ಭಕ್ತಿಯ ಸತ್ಕಾರ ಮತ್ತು ತುಲಾಭಾರ ಸ್ವೀಕರಿಸಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಭಕ್ತಿ, ಶ್ರದ್ಧೆ, ಪ್ರೀತಿ ಮತ್ತು ವಿಶ್ವಾಸದಿಂದ ಭಾಗವಹಿಸಿದ ನಿಮ್ಮೆಲ್ಲರ ಮೇಲೆ ಪೂಜ್ಯ ಚೆನ್ನಬಸವ ಶಿವಯೋಗಿಗಳ ಆಶೀರ್ವಾದ ಸದಾ ಇರಲಿದೆ ಎಂದರು.
ದೇವಾಲಯದ ಮೇಲಿರುವ ಕಳಸ ಏಕತೆಯ ಸಂಕೇತ. ಗ್ರಾಮಸ್ಥರೆಲ್ಲರೂ ಒಂದೇ ಕುಟುಂಬದವರAತೆ ಬಾಳುವ ಪಣ ತೊಟ್ಟರೆ ಇದೇ ನನ್ನ ೬೩ನೇ ಜನ್ಮದಿನಕ್ಕೆ ನೀವು ಅರ್ಪಿಸುವ ಶ್ರೇಷ್ಠ ಕಾಣಿಕೆ ಎಂದ ಅವರು, ನಾಡಿನಲ್ಲಿ ಒಂದು ಜಾತಿ, ಪಂಥಕ್ಕೆ ಸೀಮಿತವಾದಂಥ ಮಠಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ ಹಾರಕೂಡ ಮಠದಲ್ಲಿ ಯಾರನ್ನೂ ಜಾತಿ ಕೇಳುವುದಿಲ್ಲ. ಯಾರೇ ಬಂದರೂ ಸಮಾನವಾಗಿ ಕುಳಿತು ಊಟ ಮಾಡುತ್ತಾರೆ. ಇಲ್ಲಿ ಎಲ್ಲರನ್ನು ಸಮಾನವಾಗಿ ಕಾಣಲಾಗುತ್ತದೆ. ಇದೇ ಬಸವ ತತ್ವ, ಇದೇ ಪಂಚಾಚಾರ್ಯರ ತತ್ವ ಎಂದು ತಿಳಿಸಿದರು.
ಖೇಳಗಿ ಸಂಸ್ಥಾನ ಮಠದ ಶ್ರೀ ಶಿವಲಿಂಗ ಮಹಾಸ್ವಾಮೀಜಿ ಮಾತನಾಡಿ, ಹಾರಕೂಡ ಮಠಕ್ಕೆ ಭಕ್ತಿಯಿಂದ ಬಂದರೆ ಶ್ರೀ ಚೆನ್ನಬಸವ ಶಿವಯೋಗಿಗಳ ಆಶೀರ್ವಾದ ಸಿಗಲಿದೆ. ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಭಕ್ತಿಯ ದೀಪ ಬೆಳಗಿಸಿ ಭಕ್ತರಿಗೆ ಸನ್ಮಾರ್ಗ ತೋರುವ ಕೆಲಸ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಶರಣು ಸಲಗರ, ಹುಮನಾಬಾದ್ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ಮಾಜಿ ಸಂಸದ ಡಾ.ಉಮೇಶ ಜಾಧವ್ ಮಾತನಾಡಿದರು.
ಸಂಸದ ಸಾಗರ ಖಂಡ್ರೆ, ಅಳಂದ ಶಾಸಕ ಬಿ.ಆರ್. ಪಾಟೀಲ್, ಕಾಡಾ ಅಧ್ಯಕ್ಷ ಬಾಬು ಹೊನ್ನಾನಾಯಕ, ಗ್ರಾಪಂ ಅಧ್ಯಕ್ಷೆ ಶೋಭಾವತಿ ವೈಜನಾಥ ಮೂಲಗೆ, ಉಪಾಧ್ಯಕ್ಷೆ ಸಾವಿತ್ರಾ ರಾಜಕುಮಾರ ಯಾಚೆ, ಸದಸ್ಯ ವಿಠ್ಠಲ್ ಜಮಾದಾರ, ಪ್ರಮುಖರಾದ ಮಾರುತಿ ಸಜ್ಜನ್, ಬಿ.ಕೆ. ಹಿರೇಮಠ, ಜಗನ್ನಾಥ ಪಾಟೀಲ್ ಮಂಠಾಳ, ಗುರುಲಿಂಗಪ್ಪ ಸೈದಾಪುರೆ, ಮೇಘರಾಜ ನಾಗರಾಳೆ, ಸಿದ್ರಾಮಪ್ಪ ಗುದಗೆ, ಸುಭಾಷ ಮುರುಡ, ಪಂಚಾಕ್ಷರಿ ಹಿರೇಮಠ, ಮಲ್ಲಿನಾಥ ಹಿರೇಮಠ, ಸದಾನಂದ ಪಾಟೀಲ್ ಮುಡಬಿ, ರಾಜಕುಮಾರ ಬಿರಾದಾರ, ಮಹಾಂತಪ್ಪ ಶ್ರೀಚಂದ, ಈಶ್ವರಯ್ಯ ಮಠಪತಿ ಇತರರಿದ್ದರು.
ಸಂತೋಷಕುಮಾರ ಯಾಚೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಿವಕುಮಾರ ಜಡಗೆ ಹಾಗೂ ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು. ಲಕ್ಷಿö್ಮÃ ರಾಜಕುಮಾರ ಯಾಚೆ, ರಾಜಶ್ರೀ ಸ್ವಾಮಿ ಅವರು ಗುರು ಗೀತೆ ಹಾಗೂ ಪ್ರಾರ್ಥನಾಗೀತೆ ಹಾಡಿದರು. ಶಿವಶಂಕರ ಬಿರಾದಾರ ಸಂಗೀತ ಸೇವೆ ಸಲ್ಲಿಸಿದರು.
ದಾಸೋಹ ಸೇವೆ ಮಾಡಿದ ಸಿರಗಾಪುರದ ರಾಜಣ್ಣ ಬಿರಾದಾರ ಸಹೋದರರು, ಮಂಟಪ ಸೇವೆ ಮಾಡಿದ ಶೋಭಾವತಿ ಮಲ್ಲಿಕಾರ್ಜುನ ಯಾಚೆ ಹಾಗೂ ಬೆಳ್ಳಿ ಕಿರೀಟ ಸೇವೆ ಮಾಡಿದ ಪ್ರೊ.ಜಿ.ಎಸ್. ಮಾಲಿಪಾಟೀಲ್ ಮತ್ತು ಡಾ.ಮಾಯಾದೇವಿ ಮಾಲಿಪಾಟೀಲ್ ದಂಪತಿಗೆ ಶ್ರೀಗಳು ಸನ್ಮಾನಿಸಿ ಆಶೀರ್ವದಿಸಿದರು.

ಎಲ್ಲರ ಕಾಪಾಡಲಿದೆ ಪೂಜ್ಯರ ಆಶೀರ್ವಾದ

ಕಂಡರಿದ ಮಳೆಯಿಂದಾಗಿ ಅಪಾರ ಬೆಳೆ ಹಾನಿಯಾಗಿದ್ದರೂ ರೈತರು ಹೆದರಬೇಕಿಲ್ಲ. ಹಾರಕೂಡ ಶ್ರೀಗಳ ಆಶೀರ್ವಾದ ಎಲ್ಲರನ್ನು ಕಾಪಾಡಲಿದೆ. ಮುಂದಿನ ವರ್ಷ ದುಪ್ಪಟ್ಟು ಬೆಳೆ ಬರಲಿದೆ ಎಂದು ಶಾಸಕ ಶರಣು ಸಲಗರ ವಿಶ್ವಾಸ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಅವರು, ಯುವಕರು ಯಾವುದೇ ಕೆಟ್ಟ ಚಟಗಳಿದ್ದರೂ ಇಂದೇ ಬಿಡುವ ಸಂಕಲ್ಪದೊAದಿಗೆ ಪೂಜ್ಯರ ಜೋಳಿಗೆಗೆ ಅರ್ಪಿಸಿದರೆ ಬದುಕು ಬಂಗಾರವಾಗಲಿದೆ. ದೇಶದಲ್ಲಿ ಬದಾಲಾವಣೆ ತರುವ ಶಕ್ತಿ, ಭಾರತವನ್ನು ವಿಶ್ವಗುರು ಮಾಡುವ ಶಕ್ತಿ ಮಾತೆಯರಲ್ಲಿದೆ. ತಾವು ಮನಸ್ಸು ಮಾಡಿದರೆ ಪರಿವರ್ತನೆ ತರಬಹುದು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದು ಮನವಿ ಮಾಡಿದರು.
೬೪ನೇ ಜನ್ಮದಿನೋತ್ಸವ ನವದೆಹಲಿಯಲ್ಲಿ
ಶ್ರೀ ಡಾ.ಚನ್ನವೀರ ಶಿವಾಚಾರ್ಯರ ೬೪ನೇ ಜನ್ಮದಿನೋತ್ಸವ ದೇಶದ ರಾಜಧಾನಿ ನವದೆಹಲಿಯಲ್ಲಿ ೨೦೨೬ರ ನ.೨ರಂದು ನಡೆಸಲು ನಿರ್ಧರಿಸಿದ್ದು, ಇದಕ್ಕೆ ಪೂಜ್ಯರು ಸಹ ಒಪ್ಪಿಗೆ ನೀಡಿದ್ದಾರೆ ಎಂದು ಮಾಜಿ ಸಂಸದ ಡಾ.ಉಮೇಶ ಜಾಧವ್ ಹೇಳಿದರು. ಶ್ರೀಗಳಿಗೆ ಭಕ್ತರೇ ಮುಖ್ಯ. ಭಕ್ತಿಯಿಂದ ಬರುವವರ ಮೇಲೆ ಸದಾ ಅವರ ಕೃಪಾಶೀರ್ವಾದ ಇರಲಿದೆ. ಶ್ರೀಗಳ ಸಮಾಜಮುಖಿ ಕಾರ್ಯ, ಸೇವೆ ಎಲ್ಲೆಡೆ ಪರಿಚಯವಾಗಲಿ ಎಂಬ ಉz್ದೆÃಶದಿಂದ ರಾಜಧಾನಿಯಲ್ಲಿ ಅರ್ಥಪೂರ್ಣ ಜನ್ಮದಿನ ಆಚರಿಸಲು ತೀರ್ಮಾನಿಸಲಾಗಿದೆ ಎಂದರು.
ವೈಭವದ ಪಲ್ಲಕ್ಕಿ ಉತ್ಸವ
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಿರಗಾಪುರದಲ್ಲಿ ಪುಷ್ಪಾಲಂಕೃತ ಸಾರೋಟಿನಲ್ಲಿ ಹಾರಕೂಡ ಶ್ರೀಗಳ ಪಲ್ಲಕ್ಕಿ ಉತ್ಸವ ಸಾಂಸ್ಕೃತಿಕ ವೈಭವದೊಂದಿಗೆ ಜರುಗಿತು. ತಾಳ-ಮೇಳ, ವಾದ್ಯ, ಕುಂಭ ಕಳಸಗಳೊಂದಿಗೆ ನಡೆದ ಮೆರವಣಿಗೆಯಲ್ಲಿ ವಿವಿಧೆಡೆಯ ಭಜನಾ ತಂಡದವರು ಶ್ರದ್ಧಾ ಭಕ್ತಿಯಿಂದ ಭಜನೆ ಮಾಡುತ್ತ ಹೆಜ್ಜೆ ಹಾಕಿದರು. ಮಾರ್ಗದುದ್ದಕ್ಕೂ ಭಕ್ತಸ್ತೋಮ ಭಕ್ತಿಯಿಂದ ನಮಿಸಿದರೆ, ಸಾರೋಟಿನ ಪಲ್ಲಕ್ಕಿಯಲ್ಲಿ ಕುಳಿತ ಶ್ರೀಗಳು ಎಲ್ಲರನ್ನು ಆಶೀರ್ವದಿಸಿದರು.
"

ಸ್ವಾಮೀಜಿಯಾದವರು ಒಂದು ಪಕ್ಷ, ಜಾತಿ ಅಥವಾ ಒಂದು ಪಂಥಕ್ಕೆ ಸೀಮಿತವಾಗಬಾರದು. ಧರ್ಮದ ಬಗ್ಗೆ ಹೋರಾಟ ಒಳ್ಳೆಯದು. ಅದರೆ ಜಾತಿ ವಿಷಯದಲ್ಲಿ ಹೋರಾಟ ಮಾಡಿದರೆ ಪರಮಾತ್ಮ ಒಪ್ಪುವುದಿಲ್ಲ. ಆಸ್ತಿ, ಐಶ್ವರ್ಯ, ಅಧಿಕಾರ ಶಾಶ್ವತವಲ್ಲ. ಜೀವನದಲ್ಲಿ ಸಮಾಜಕ್ಕಾಗಿ ಮಾಡುವ ಒಳ್ಳೆಯ ಕಾರ್ಯಗಳೇ ಶಾಶ್ವತ. ಜಗತ್ತಿನಲ್ಲಿ ಇಬ್ಬರು ಶ್ರೇಷ್ಠ ದೇವರು. ಹೆತ್ತ ತಾಯಿ ಮತ್ತು ಹೊತ್ತ ಭೂಮಿ ಎಂಬುದನ್ನು ಯಾರೊಬ್ಬರೂ ಮರೆಯಬಾರದು.'

| ಶ್ರೀ ಡಾ.ಚನ್ನವೀರ ಶಿವಾಚಾರ್ಯಸಂಸ್ಥಾನ ಹಿರೇಮಠ ಹಾರಕೂಡ


"

ಹಾರಕೂಡ ಶ್ರೀ ಡಾ.ಚನ್ನವೀರ ಶಿವಾಚಾರ್ಯರ ಆಶೀರ್ವಾದ ಮತ್ತು ವಾಣಿಯಲ್ಲಿ ಅಪಾರ ಶಕ್ತಿ ಇದೆ. ಭಕ್ತಿಯಿಂದ ಬರುವ ಭಕ್ತರ ಮೇಲೆ ಅವರ ಕೃಪಾಶೀರ್ವಾದ ಸದಾ ಇರಲಿದೆ.

| ಡಾ.ಸಿದ್ದಲಿಂಗಪ್ಪ ಪಾಟೀಲ್ಹುಮನಾಬಾದ್ ಶಾಸಕ




ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net