

ಭಾಲ್ಕಿ: ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ನಡೆದ ಬಾಲಕ ಮತ್ತು ಬಾಲಕಿಯರ ವಿವಿಧ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ವಿವರ : ಬಾಲಕಿಯರ ವಿಭಾಗದಿಂದ ಅಕ್ಷರಾ 100 ಮೀ.ಓಟದಲ್ಲಿ ಪ್ರಥಮ ಸ್ಥಾನ, ಸುಕನ್ಯಾ ಯೋಗ, ಸ್ನೇಹಾ ಚೇಸ್ ಮತ್ತು ಬಾಸ್ಕೆಟ್ ಬಾಲ್ ನಾಯಕಿ ಅಕ್ಷತಾ ನೇತೃತ್ವದ ತಂಡ ಪ್ರಥಮ, ವಾಲಿಬಾಲ್ನಲ್ಲಿ ನಾಯಕಿ ಅರ್ಚನಾ ನೇತೃತ್ವದ ತಂಡ ದ್ವೀತಿಯ ಸ್ಥಾನ ಪಡೆದಿದೆ. ಬಾಲಕರ ವಿಭಾಗದಿಂದ ಸಾಯಿನಾಥ 800 ಮೀ.ಓಟ ದ್ವೀತಿಯ, ಶಂಕರ ಜಿಗಿತದಲ್ಲಿ ದ್ವೀತಿಯ, ಓಂಪ್ರಕಾಶ ಶರಣು ಯೋಗದಲ್ಲಿ ಪ್ರಥಮ, ದೇವರಾಜ ಕುಸ್ತಿಯಲ್ಲಿ ಪ್ರಥಮ, ಚಂದ್ರಶಾ ವೈಭವ, ವೇದಾಂತ ಸಿದ್ಧಾರ್ಥ 400 ರಿಲೇ ಪ್ರಥಮ, ಬಾಸ್ಕೆಟ್ ಬಾಲ್ನಲ್ಲಿ ನಾಯಕ ಮುಕೇಶ ನೇತೃತ್ವದ ತಂಡ ಪ್ರಥಮ ಮತ್ತು ಪುಟ್ಬಾಲ್ನಲ್ಲಿ ನಾಯಕ ರಾಘವೇಂದ್ರ ನೇತೃತ್ವದ ತಂಡ ದ್ವೀತಿಯ ಸ್ಥಾನ ಪಡೆದುಕೊಂಡಿದೆ. ಶಟಲ್ ಬ್ಯಾಡ್ಮಿಂಟನ್ನಲ್ಲಿ ನಾಯಕ ಚಿನ್ಮಯ ನೇತೃತ್ವದ ತಂಡ ದ್ವೀತಿಯ ಸ್ಥಾನ ಪಡೆದುಕೊಂಡಿದೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಕಾರ್ಯದರ್ಶಿ ಮಹಾಲಿಂಗ ಸ್ವಾಮೀಜಿ, ಆಡಳಿತಾಧಿಕಾರಿ ಮೋಹನ ರಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ, ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ ಹಾಗೂ ಸಿಬ್ಬಂದಿ ಹರ್ಷ ವ್ಯಕ್ತ ಪಡಿಸಿದ್ದಾರೆ.