ಆರೋಗ್ಯ ತಪಾಸಣೆಗೆ ನಿರ್ಲಕ್ಷ್ಯ ಬೇಡ

ಔರಾದ್​ ತಾಲೂಕಿನ ನಾಗಮಾರಪಳ್ಳಿ ಗ್ರಾಮದಲ್ಲಿ ಬುಧವಾರ  ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ರೋಗಿಗಳ ತಪಾಸಣೆ ಮಾಡಲಾಯಿತು. ಪ್ರಶಾಂತ ಸೋಪ್ಪಣ್ಣ, ಡಾ.ನಿತಿನ್​ ಮಲ್ಲಾಸುರೆ, ಡಾ.ಸ್ವಾತಿ ರಾಜೊಳೆ, ವೇದಮೂರ್ತಿ, ವಿದ್ಯಾಸಾಗರ ಬಿರಾದರ್​, ಸಂಗೀತ ದೇಶಮುಖ ಇತರರಿದ್ದರು.
ಔರಾದ್​ ತಾಲೂಕಿನ ನಾಗಮಾರಪಳ್ಳಿ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ರೋಗಿಗಳ ತಪಾಸಣೆ ಮಾಡಲಾಯಿತು. ಪ್ರಶಾಂತ ಸೋಪ್ಪಣ್ಣ, ಡಾ.ನಿತಿನ್​ ಮಲ್ಲಾಸುರೆ, ಡಾ.ಸ್ವಾತಿ ರಾಜೊಳೆ, ವೇದಮೂರ್ತಿ, ವಿದ್ಯಾಸಾಗರ ಬಿರಾದರ್​, ಸಂಗೀತ ದೇಶಮುಖ ಇತರರಿದ್ದರು.
Published on: 

ಔರಾದ್​: ನೆಮ್ಮದಿಯ ಜೀವನಕ್ಕೆ ಸದೃಢ ಆರೋಗ್ಯ ಅವಶ್ಯ. ಕಾಲ ಕಾಲಕ್ಕೆ ತಕ್ಕಂತೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ನೆಮ್ಮದಿಯಿಂದ ಜೀವನ ಸಾಗಿಸಬೇಕು ಎಂದು ಯಶಸ್ವಿನಿ ಜಿಲ್ಲಾ ಸಂಯೋಜಕ ಪ್ರಶಾಂತ ಸೋಪ್ಪಣ್ಣ ಹೇಳಿದರು.

ತಾಲೂಕಿನ ನಾಗಮಾರಪಳ್ಳಿ ಗ್ರಾಮದಲ್ಲಿ ಬುಧವಾರ ವಿ.ಕೇರ್​ ಆಸ್ಪತ್ರೆ ಹಾಗೂ ಯಶಸ್ವಿನಿ ಟ್ರಸ್ಟ್​ ಸಹಯೋಗದಲ್ಲಿ ವಿ&ಕೇರ್​ ಆಸ್ಪತ್ರೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ತಪಾಸಣೆಯಲ್ಲಿ ರ್ನಿಲಕ್ಷ ಸಲ್ಲದು, ಪ್ರತಿದಿನ ಹೆಚ್ಚು ನಡೆದಾಡುವ ಅಭ್ಯಾಸ ರೂಢಿಸಿಕೊಂಡರೆ ಆರೋಗ್ಯ ಉತ್ತಮಪಡಿಸಿಕೊಳ್ಳಬಹುದು ಎಂದರು.

ವಿ&ಕೇರ್​ ಆಸ್ಪತ್ರೆ ವ್ಯವಸ್ಥಾಪಕ ವಿದ್ಯಾಸಾಗರ್​ ಬಿರಾದಾರ್​ ಮಾತನಾಡಿ, ಶಿಬಿರಗಳು ವ್ಯಕ್ತಿಗಳ ಆರೋಗ್ಯ ತಪಾಸಣೆ ಜತೆಗೆ ಮುಂದೆ ಎದುರಾಗಬಹುದಾದ ಆರೋಗ್ಯ ಸಮಸ್ಯೆಗಳನ್ನು ಪತ್ತೆ ಹಚ್ಚುವಲ್ಲಿ ಸಹಕಾರಿ ಆಗಿವೆ. ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಈ ಶಿಬಿರ ಏರ್ಪಡಿಸಲಾಗಿದೆ ಎಂದರು.

ಪಿಡಿಒ ಸಂಗೀತಾ ದೇಶಮುಖ ಮಾತನಾಡಿ, ಇಂತಹ ಆರೋಗ್ಯ ಶಿಬಿರ ಹಳ್ಳಿಗಳಲ್ಲಿ ಹೆಚ್ಚು ನಡೆಯಬೇಕು. ಇದರಿಂದ ಗ್ರಾಮಾಂತರ ಪ್ರದೇಶದ ಜನಸಾಮಾನ್ಯರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಸಾಧ್ಯ ಎಂದರು.

ಶಿಬಿರದಲ್ಲಿ 130ಕ್ಕೂ ಹೆಚ್ಚು ಜನರಿಗೆ ಬಿಪಿ, ಶುಗರ್​ ಪರೀಕ್ಷೆ, ಇಸಿಜಿ ತಪಾಸಣೆ ಮಾಡಿ, ಉಚಿತ ಔಷಧ ನೀಡಲಾಯಿತು. ಡಾ.ನಿತಿನ್​ ಮಲ್ಲಾಸುರೆ, ಡಾ.ಸ್ವಾತಿ ರಾಜೋಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net